ವರ್ಷದಲ್ಲಿ ಐದನೇ ಬಾರಿಗೆ ನೈರುತ್ಯ ಐಸ್‌ಲ್ಯಾಂಡ್‌ನಲ್ಲಿ(Iceland) ಜ್ವಾಲಾಮುಖಿ (Volcano)ಎದ್ದಿದ್ದು, ಪ್ರಕೃತಿಯ ಈ ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
❗🌋🇮🇸 – Incredible images of the eruption of the Sundhnuksgigarodur volcano in Iceland, which began today.
This is the fifth eruptive episode since December, and the sight is simply spectacular! pic.twitter.com/51PheGGb5k
— 🔥🗞The Informant (@theinformant_x) May 29, 2024
ಕರಾವಳಿ ಪ್ರದೇಶವಾಗಿರುವ ಉತ್ತರ ಗ್ರಿಂಡವಿಕ್‌ನಲ್ಲಿ ಮದ್ಯಾಹ್ನದ ಸಮಯದಲ್ಲಿ ಈ ಜ್ವಾಲಾಮುಖಿ ಉಕ್ಕಲು ಆರಂಭವಾಗಿದ್ದು , ಈ ಭಾಗದಲ್ಲಿ ನೆಲೆಸಿದ್ದ ಸುಮಾರು 3800 ಜನರನ್ನು ಸ್ಥಳಾಂತರ ಮಾಡಲಾಗಿದೆ. ಮೂರು ವರ್ಷಗಳ ಹಿಂದೆ ಇಲ್ಲಿ ಜ್ವಾಲಾಮುಖಿ ಸಕ್ರೀಯಗೊಂಡಿದ್ದು ಈ ಸುಂದ್ನುಕ್ಕಾಗಿಗಾರ್ ಜ್ವಾಲಾಮುಖಿ ಅತ್ಯಂತ ಶಕ್ತಿಶಾಲಿಯಾಗಿದೆ.
ಲಾವಾ 164 ಅಡಿಗಳಷ್ಟು ಮೇಲೆ ಹಾರಿದ್ದು ಸುಮಾರು 3.4 ಕಿಮೀಟರ್ ವ್ಯಾಪ್ತಿಯಲ್ಲಿ ಜ್ವಾಲಾಮುಖಿ ಹರಡಿದೆ. ಪೆನಿನ್‌ಸ್ಯುವೆಲ್ಲಾದಲ್ಲಿ 2021ರ ಬಳಿಕ ಇದು 8ನೇ ಜ್ವಾಲಾಮುಖಿ ಆಗಿದ್ದು ಸುಮಾರು 30 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಈ ಜ್ವಾಲಾಮುಖಿ ಉಕ್ಕಿದ ಪರಿಣಾಮ ಆ ಭಾಗದ ತಾಪಮಾನದಲ್ಲಿ ಏರುಪೇರಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಐಸ್‌ಲ್ಯಾಂಡ್ ನೋಡಲು ಗುಡ್ಡಗಳು, ಮಂಜುಗಡ್ಡೆಗಳಿಂದ ಕೂಡಿದ್ದರೂ ಆಳದಲ್ಲಿ ಕುದಿಯುವ ಲಾವಾ ಹೊಂದಿದೆ. ಹೀಗಾಗಿ ಈ ಪ್ರದೇಶವನ್ನು ‘ಬೆಂಕಿ ಮತ್ತು ಮಂಜುಗಟ್ಟೆಯ ಭೂಮಿ’ ಎಂದೇ ಕರೆಯಲಾಗುತ್ತದೆ.