Sunday, July 19, 2026
Homeಕ್ರೀಡೆVIRAT KOHLI : ಕೊಹ್ಲಿ ಶತಕಕ್ಕೆ ರೋಹಿತ್ ಫಿದಾ, ಕಿಲಾಡಿ ಜೋಡಿಯ ಸೆಲೆಬ್ರೇಷನ್ ವಿಡಿಯೋ ವೈರಲ್

VIRAT KOHLI : ಕೊಹ್ಲಿ ಶತಕಕ್ಕೆ ರೋಹಿತ್ ಫಿದಾ, ಕಿಲಾಡಿ ಜೋಡಿಯ ಸೆಲೆಬ್ರೇಷನ್ ವಿಡಿಯೋ ವೈರಲ್

ಜಾರ್ಖಂಡ್: ರಾಂಚಿ ಮೈದಾನದಲ್ಲಿ ವಿರಾಟ್ ಕೊಹ್ಲಿ (Virat kohli) ಇಂದು (ನ.30) ಹೊಸ ಇತಿಹಾಸ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕ ದಿನ ಪಂದ್ಯದಲ್ಲಿ ಚೇಸ್ ಮಾಸ್ಟರ್ ಕಿಂಗ್ ಕೊಹ್ಲಿ ಅಕ್ಷರಶಃ ಅಬ್ಬರಿಸಿದ್ದು ಕೊಹ್ಲಿ ಬ್ಯಾಟ್ ನಿಂದ ಶತಕ (century) ಸಿಡಿದಿದೆ. 120 ಬಾಲ್ ಗಳಲ್ಲಿ 135 ರನ್ ಸಿಡಿಸಿ ಕೊಹ್ಲಿ ಮಿಂಚಿದ್ದಾರೆ. ಈ ವೇಳೆ ಕೊಹ್ಲಿ ಮತ್ತು ರೋಹಿತ್ ಶರ್ಮಾ (Rohith Sharma) ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ (Viral) ಆಗಿದೆ.

ಹೌದು, ವಿರಾಟ್ ಕೊಹ್ಲಿ ಶತಕ ಬಾರಿಸಿದ ಬಳಿಕ ಅದೇ ಜೋಶ್ ನಲ್ಲಿ ಎತ್ತರಕ್ಕೆ ಜಿಗಿದು ವಿಶೇಷವಾಗಿ ತಮ್ಮ ಶತಕವನ್ನು ಸಂಭ್ರಮಿಸಿದರು. ಈ ವೇಳೆ ರೋಹಿತ್ ಶರ್ಮಾ ಕೂಡ ಎಮೋಷನಲ್ ಆಗಿದ್ದು, ಇವರಿಬ್ಬರ ಸಂಭ್ರಮಾಚರಣೆಯ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ಇದನ್ನೂ ಓದಿ : ರಾಂಚಿಯಲ್ಲಿ ಅಬ್ಬರಿಸಿದ ಕೊಹ್ಲಿ, ಸಚಿನ್ ದಾಖಲೆ ಉಡೀಸ್- VIDEO

ಬೌಂಡರಿ ಸಿಡಿಸುವ ಮೂಲಕ ಶತಕ ಪೂರೈಸಿದ ಕೊಹ್ಲಿ ಎತ್ತರಕ್ಕೆ ಜಿಗಿದು, ಆ ಬಳಿಕ ಶಾಂತವಾಗಿ ತಮ್ಮ ಹೆಲ್ಮಟ್ ಮತ್ತು ಗೌಸ್‌ಗಳನ್ನು ತೆಗೆದು ತಮ್ಮ ಕುತ್ತಿಗೆಯಲ್ಲಿದ್ದ ಲಾಕೆಟ್‌ಗೆ ಮುತ್ತಿಟ್ಟು, ಆಕಾಶದತ್ತ ನೋಡಿ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಪೆವಿಲಿಯನ್ ನಲ್ಲಿದ್ದ ರೋಹಿತ್ ಶರ್ಮಾ ಚಪ್ಪಾಳೆ ತಟ್ಟಿ ಭಾವನಾತ್ಮಕವಾಗಿ ಖುಷಿ ಪಟ್ಟಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!