Sunday, January 25, 2026
Homeಕ್ರೀಡೆVIRAT KOHLI: ವಿರಾಟ್ ಬ್ಯಾಟ್ ನಿಂದ ಮತ್ತೊಂದು ಶತಕ - ಬ್ಯಾಕ್ ಟು ಬ್ಯಾಕ್ ಅಬ್ಬರಿಸಿದ...

VIRAT KOHLI: ವಿರಾಟ್ ಬ್ಯಾಟ್ ನಿಂದ ಮತ್ತೊಂದು ಶತಕ – ಬ್ಯಾಕ್ ಟು ಬ್ಯಾಕ್ ಅಬ್ಬರಿಸಿದ ಕಿಂಗ್ ಕೊಹ್ಲಿ

ಛತ್ತೀಸ್​​ಘಡ : ವಿರಾಟ್ ಕೊಹ್ಲಿ (Virat kohli) ಮೈದಾನದಲ್ಲಿ ಮತ್ತೆ ಅಬ್ಬರಿಸಿದ್ದು, ತಮ್ಮ ಬ್ಯಾಟ್ ನಿಂದ ಮತ್ತೊಂದು ಶತಕ (Century) ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ಕೂಡ ಅಬ್ಬರಿಸಿದ್ದ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದರು. ಇದೀಗ ಎರಡನೇ ಪಂದ್ಯದಲ್ಲೂ ಕಿಂಗ್ ಆರ್ಭಟ ಮುಂದುವರೆದಿದೆ.

ಹೌದು, ರಾಯ್​ಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದ 53 ನೇ
ಶತಕವನ್ನು ಪೂರೈಸಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ಸತತವಾಗಿ ಸಿಡಿಸಿದ ಎರಡನೇ ಶತಕ ಇದಾಗಿದೆ. ಅಕ್ಷರಶಃ ಅಬ್ಬರಿಸಿದ ಕೊಹ್ಲಿ ಶತಕ ಸಿಡಿಸುವುದರ ಜೊತೆಗೆ ರುತುರಾಜ್ ಗಾಯಕ್ವಾಡ್ ಜೊತೆಗೂಡಿ ಶತಕದ ಜೊತೆಯಾಟ ಕಟ್ಟಿದ್ದಾರೆ.ಆ ಮೂಲಕ ಭಾರತ ತಂಡವನ್ನು 200 ರನ್​ಗಳ ಗಡಿ ದಾಟುವಂತೆ ಮಾಡಿದ್ದಾರೆ.

ಇದನ್ನೂ ಓದಿ : ಕೊಹ್ಲಿ ಶತಕಕ್ಕೆ ರೋಹಿತ್ ಫಿದಾ, ಕಿಲಾಡಿ ಜೋಡಿಯ ಸೆಲೆಬ್ರೇಷನ್ ವಿಡಿಯೋ ವೈರಲ್

ಇಂದಿನ ಪಂದ್ಯದಲ್ಲಿ ಇಂಡಿಯಾ ಮೊದಲು ಬ್ಯಾಟಿಂಗ್ ಗೆ ಇಳಿದಿತ್ತು.ಆದ್ರೆ ರೋಹಿತ್ ಶರ್ಮಾ ಬಹಳ ಬೇಗ ತಮ್ಮ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಯಶಸ್ವಿ ಜೈಸ್ವಾಲ್ ಕೂಡ ಬಹಳ ಬೇಗ ಪೆವಿಲಿಯನ್‌ಗೆ ತೆರಳಿದರು. ಹೀಗಾಗಿ ಕೊಹ್ಲಿ ಆಟ ಭಾರತದ ಪಾಲಿಗೆ ಅತ್ಯವಶ್ಯಕವಾಗಿತ್ತು. ಈ ಜವಾಬ್ದಾರಿಯನ್ನು ಕೊಹ್ಲಿ ಅದ್ಭುತವಾಗಿ ನಿಭಾಯಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ ಕೊಹ್ಲಿ ಅರ್ಧಶತಕ ಪೂರೈಸಿದ್ರು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡದ ಕೊಹ್ಲಿ, ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಮನ ಬಂದಂತೆ ದಂಡಿಸಿದ್ರು. ಆ ಮೂಲಕ 38 ನೇ ಓವರ್ ನಲ್ಲಿ 93 ಎಸೆತಗಳಲ್ಲಿ 102 ರನ್ ಗಳಿಸಿ ಔಟಾದ ತಮ್ಮ 53 ನೇ ಏಕದಿನ ಶತಕವನ್ನು ಪೂರೈಸಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!