Thursday, April 16, 2026
Homeಟಾಪ್ ನ್ಯೂಸ್VANDE BHARAT: ಮತ್ತೆ ಸುದ್ದಿಯಲ್ಲಿ ವಂದೇ ಭಾರತ್‌, ಆಹಾರದಲ್ಲಿ ಸಿಕ್ಕಿತು ಲೋಹದ ತುಂಡು

VANDE BHARAT: ಮತ್ತೆ ಸುದ್ದಿಯಲ್ಲಿ ವಂದೇ ಭಾರತ್‌, ಆಹಾರದಲ್ಲಿ ಸಿಕ್ಕಿತು ಲೋಹದ ತುಂಡು

ಗುವಾಹಟಿ: ಕಳೆದ ಕೆಲ ದಿನಗಳಿಂದ ವಂದೇ ಭಾರತ್‌ (Vande Bharat) ರೈಲಿನಲ್ಲಿ ಒಂದೆಲ್ಲಾ ಒಂದು ಸಮಸ್ಯೆಗಳು ಕಾಣಿಸುತ್ತಿದೆ. ಮೊನ್ನೆಯಷ್ಟೇ ಆಹಾರದಲ್ಲಿ ಜಿರಳೆ ಪತ್ತೆ ಆಗಿತ್ತು. ಇದೀಗ ಲೋಹದ ತುಂಡು ಪತ್ತೆ ಆಗಿರುವ ಘಟನೆ ನಡೆದಿದೆ.

 

ಏನಿದು ಘಟನೆ?


ಗುವಾಹಟಿಯ ಕಾಮಾಖ್ಯದಿಂದ ಹೌರಗೆ ಪ್ರಯಾಣ ಬೆಳೆಸುವ ವಂದೇ ಭಾರತ್‌ ಸ್ಲೀಪರ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಒಬ್ಬರು ಈ ವಿಚಾರವಾಗಿ ಆರೋಪ ಮಾಡಿದ್ದಾರೆ. ಈ ಘಟನೆಯ ಬಗ್ಗೆ ವಿಡಿಯೋ ಮಾಡಿ ಹಾಕಿರುವ ಅವರು, ನಾನು ಕಾಮಾಖ್ಯದಿಂದ ಹೌರಗೆ ಪ್ರಯಾಣ ಮಾಡುವ ವಂದೇ ಭಾರತ್‌ ಟ್ರೈನ್‌ನಲ್ಲಿ ಇದ್ದೇನೆ. ಈ ರೈಲಿನಲ್ಲಿ ನನಗೆ ನೀಡಿದ್ದ ಆಹಾರವನ್ನ ನಾನು ತಿನ್ನುವವನಿದ್ದೆ. ಆದರೆ ನನಗೆ ಅದರಲ್ಲಿ ಲೋಹದ ತುಂಡು ಸಿಕ್ಕಿದೆ. ನಾನು ಇದನ್ನ ಪ್ರಶ್ನೆ ಮಾಡಿದಾಗ ಸಿಬ್ಬಂದಿಗಳು ಆಹಾರವನ್ನ ಬದಲಾಯಿಸಿಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ನನಗೆ ಏನಾದರೂ ಆಗಿದ್ದರೆ ಏನು ಗತಿ. ನನ್ನ ಕುಟುಂಬದವರಿಗೆ ಇದನ್ನೇ ಬದಲಾಯಿಸಿ ಕೊಟ್ಟಿದ್ರೆ ಏನಾಗುತ್ತಿತ್ತು. ನನ್ನ ಜೀವಕ್ಕೆ ಜವಾಬ್ದಾರಿ ಯಾರು ಎಂದು ಪ್ರಶ್ನೆ ಮಾಡಿದ್ದು,  ವಂದೇ ಭಾರತ್‌ ರೈಲಿನಲ್ಲಿ ಪದೇ ಪದೇ ಈ ರೀತಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರ ಆಹಾರದಲ್ಲಿ ಜಿರಳೆ ಪತ್ತೆ

ಐಷಾರಾಮಿ ಸೌಲಭ್ಯಗಳಿಗೆ ಹೆಸರಾದ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat) ರೈಲಿನಲ್ಲಿ ನೀಡಲಾದ ಆಹಾರದ ಗುಣಮಟ್ಟ ಈಗ ಮತ್ತೆ ಚರ್ಚೆಗೆ ಬಂದಿದೆ. ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ನೀಡಲಾದ ಊಟದ ಬಾಕ್ಸ್‌ನಲ್ಲಿ ಜಿರಳೆಯಂತಹ ಕೀಟವೊಂದು ಪತ್ತೆಯಾಗಿದ್ದು, ಈ ಘಟನೆ ರೈಲ್ವೆ ಇಲಾಖೆಗೆ ಮುಜುಗರ ಉಂಟುಮಾಡಿದೆ. ಈ ಕುರಿತು ಪ್ರಯಾಣಿಕರು ವಿಡಿಯೋ ಮತ್ತು ಫೋಟೋಗಳನ್ನು ಎಕ್ಸ್ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರೈಲಿನಲ್ಲಿ ನೀಡುವ ಆಹಾರ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದ್ದಿದೆ.

ಪ್ರಯಾಣಿಕರು ಹಂಚಿಕೊಂಡಿರುವ ಮಾಹಿತಿಯಂತೆ, ಅವರು ಪ್ರಯಾಣಿಸುತ್ತಿದ್ದ ಕೋಚ್‌ನಲ್ಲಿ ಕನಿಷ್ಠ ಇಬ್ಬರಿಗೆ ನೀಡಲಾದ ದಾಲ್-ಚಾವಲ್ ಊಟದಲ್ಲಿ ಕೀಟಗಳು ಕಂಡುಬಂದಿವೆ. ಇದನ್ನು ಗಮನಿಸಿದ ಕೂಡಲೇ ಕೋಚ್‌ನಲ್ಲಿದ್ದ ಇತರ ಪ್ರಯಾಣಿಕರು ಊಟ ಮಾಡುವುದನ್ನು ನಿಲ್ಲಿಸಿದ್ದಾರೆ. ಈ ಆಹಾರವನ್ನು ಆರ್.ಕೆ. ಗ್ರೂಪ್‌ನ ಅಂಗಸಂಸ್ಥೆಯಾದ ಬೃಂದಾವನ್ ಫುಡ್ ಪ್ರಾಡಕ್ಟ್ಸ್ ಸರಬರಾಜು ಮಾಡಿತ್ತು. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಪ್ರಯಾಣಿಕರು, ಆಹಾರ ತಯಾರಿಕೆಯಲ್ಲಿ ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕೂಡಲೇ ಈ ಕೆಟರಿಂಗ್ ಸಂಸ್ಥೆಯ ಪರವಾನಗಿ ರದ್ದುಗೊಳಿಸಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಘಟನೆ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (IRCTC), ಸಂಬಂಧಪಟ್ಟ ಆಹಾರ ಸರಬರಾಜು ಸಂಸ್ಥೆಗೆ 10 ಲಕ್ಷ ರೂಪಾಯಿಗಳ ಭಾರಿ ದಂಡ ವಿಧಿಸಿದೆ.

ಇದನ್ನೂ ಓದಿ : ವಂದೇ ಭಾರತ್ ರೈಲಿನಲ್ಲಿ ಮಹಿಳೆಯರ ನೃತ್ಯ: ಪ್ರಯಾಣಿಕರಿಗೆ ಕಿರಿಕಿರಿ : VIDEO

ಹೆಚ್ಚಿನ ಸುದ್ದಿ

Change Language »
error: Content is protected !!