ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ರೆಸ್ಟೋರೆಂಟ್ ಒಂದರ ಕೆಲಸಗಾರ ರೋಟಿ ತಯಾರಿಸುವ ವೇಳೆ ಅದರ ಮೇಲೆ ಉಗುಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
‘ಚಿಕನ್ ಪಾಯಿಂಟ್’ ಎಂಬ ಆಹಾರ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ವೈರಲ್ ವೀಡಿಯೋದಲ್ಲಿ ಕೆಲಸಗಾರನು ತಂದೂರಿನಲ್ಲಿ ರೋಟಿ ಬೇಯಿಸಿದ ಬಳಿಕ ಅದರ ಮೇಲೆ ಉಗುಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಈ ಅಸಹ್ಯಕರ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು, ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡಿದೆ.
ಇದನ್ನೂ ಓದಿ : ಕ್ಷುಲಕ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ – ಬೈಕ್ ಸವಾರರಿಗೆ ಬಿತ್ತು ಗೂಸಾ.!
ಈ ಕುರಿತು ಮಾತನಾಡಿದ ಎಸಿಪಿ ಸೂರ್ಯಬಲಿ ಮೌರ್ಯ, ಜನವರಿ 8ರಂದು ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಧಮಾನಪುರಂ ಔಟ್‌ಪೋಸ್ಟ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವೀಡಿಯೋ ಪೊಲೀಸರ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ವೀಡಿಯೋ ಪರಿಶೀಲನೆಯ ನಂತರ ಆರೋಪಗಳು ಪ್ರಾಥಮಿಕವಾಗಿ ಸತ್ಯವೆಂದು ದೃಢಪಟ್ಟಿವೆ ಎಂದಿದ್ದಾರೆ.
#गाजियाबाद: नॉनवेज रेस्टोरेंट में रोटी में थूकने का वीडियो वायरल। आरोपी रोटी पर थूककर तंदूर में डालते कैमरे में कैद। A 1 चिकन शॉप का वीडियो हो रहा वायरल। लड़कों ने पकड़कर आरोपी जावेद को पुलिस को सौंपा। पुलिस ने शिकायत पर दर्ज की FIR,आरोपी गिरफ्तार। #Reels #uttarpardesh pic.twitter.com/XDaWyXbEsZ
— Danish Khan (@Danishk77853628) January 9, 2026
ಘಟನೆಯ ಗಂಭೀರತೆಯನ್ನು ಗಮನಿಸಿ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದು, ರೆಸ್ಟೋರೆಂಟ್ ಕೆಲಸಗಾರ ಜಾವೇದ್ ಅನ್ಸಾರಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಸಂಬಂಧಿತ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.