Saturday, May 16, 2026
Homeಟಾಪ್ ನ್ಯೂಸ್VIRAL NEWS: ಡ್ಯಾನ್ಸ್‌ ಮೂಲಕ ವಿದೇಶಿ ಕ್ಲೈಂಟ್ ಅನ್ನು ಸ್ವಾಗತಿಸಿದ ಉದ್ಯೋಗಿಗಳು- ವೀಡಿಯೋ ವೈರಲ್‌

VIRAL NEWS: ಡ್ಯಾನ್ಸ್‌ ಮೂಲಕ ವಿದೇಶಿ ಕ್ಲೈಂಟ್ ಅನ್ನು ಸ್ವಾಗತಿಸಿದ ಉದ್ಯೋಗಿಗಳು- ವೀಡಿಯೋ ವೈರಲ್‌

ವಿದೇಶಿ ಕ್ಲೈಂಟ್‌ನನ್ನು ಸ್ವಾಗತಿಸಲು ಉದ್ಯೋಗಿಗಳು ನೃತ್ಯ ಮಾಡುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ರೆಡ್ಡಿಟ್ ಮತ್ತು ಎಕ್ಸ್‌ನಲ್ಲಿ ಹರಿದಾಡುತ್ತಿರುವ ಈ ಕ್ಲಿಪ್‌ನಲ್ಲಿ ಸಿಬ್ಬಂದಿ ‘ಮೈ ತೇರಾ ಬಾಯ್‌ಫ್ರೆಂಡ್’ ನಲ್ಲಿ ಸೋಲೋ ಸೇರಿದಂತೆ ತೆಲುಗು ಮತ್ತು ಬಾಲಿವುಡ್ ಹಾಡುಗಳಿಗೆ ಕುಣಿಯುವುದನ್ನು ತೋರಿಸುತ್ತದೆ. ಕೆಲ ಹೊತ್ತು ಉದ್ಯೋಗಿಗಳ ಡ್ಯಾನ್ಸ್‌ ನೋಡಿ ಖಷಿಪಟ್ಟ ಕ್ಲೈಂಟ್, ನಂತರ ತಾವೂ ಅವರ ಜೊತೆ ಸೇರಿಕೊಂಡು ಹೆಜ್ಜೆ ಹಾಕಿದರು.

ಈ ವೀಡಿಯೊಗೆ ವಿಮರ್ಶಾತ್ಮಕವಾಗಿ ಶೀರ್ಷಿಕೆ ಕೂಡ ನೀಡಲಾಗಿದೆ: “ಭಾರತವು ಕಾರ್ಪೊರೇಟ್ ಕಚೇರಿಗಳನ್ನು ಅಶ್ಲೀಲವಾಗಿ ಚಿತ್ರಿಸುವುದನ್ನು ನಿಲ್ಲಿಸಬೇಕು… ಭಾರತೀಯ ಹುಡುಗಿಯರು ಕಚೇರಿಯಲ್ಲಿ ನೃತ್ಯ ಮಾಡುವುದನ್ನು ಮತ್ತು ವಿದೇಶಿ ವ್ಯಕ್ತಿಯನ್ನು ಸ್ವಾಗತಿಸುವುದನ್ನು ಹಾಗೂ ಆತನನ್ನು ಕೂಡ ಡ್ಯಾನ್ಸ್‌ ಮಾಡಲು ಒತ್ತಾಯಿಸುವುದನ್ನು ನೋಡುವುದು ತುಂಬಾ ಶೋಚನೀಯವಾಗಿದೆ. ಇಂತಹ ಪ್ರದರ್ಶನವು ಇತರ ದೇಶಗಳಿಗೆ ಭಾರತೀಯ ಕಚೇರಿಗಳು ಗಂಭೀರ ಕೆಲಸಕ್ಕೆ ಅರ್ಹವಲ್ಲ ಎಂದು ಭಾವಿಸುವಂತೆ ಮಾಡುತ್ತದೆ” ಎಂದು ಬರೆಯಲಾಗಿದೆ.

ಕೆಲವರು ಇದನ್ನು ಶ್ಲಾಘಿಸಿದರೆ, ಇನ್ನು ಕೆಲವರು ಇದನ್ನು ವೃತ್ತಿಪರ ಗಡಿಗಳ ಉಲ್ಲಂಘನೆ ಎಂದು ಟೀಕಿಸಿದರು. ಕೆಲವರು ಕೆಲಸದ ಸ್ಥಳದಲ್ಲಿನ ಆಳವಾದ ಸಾಂಸ್ಕೃತಿಕ ಸಮಸ್ಯೆಗಳನ್ನು ಎತ್ತಿ ತೋರಿಸಿದರು. “ಮೊದಲ ಹೆಜ್ಜೆ ವೃತ್ತಿಪರ ವಾತಾವರಣದಲ್ಲಿರುವ ಜನರನ್ನು ‘ಸರ್’ ಮತ್ತು ‘ಮೇಡಂ’ ಎಂದು ಕರೆಯುವುದನ್ನು ನಿಲ್ಲಿಸುವುದು. ಇಂಗ್ಲಿಷ್ ಮಾತೃಭಾಷಿಕರು ಕೆಲಸದಲ್ಲಿ ಅದನ್ನು ವಿರಳವಾಗಿ ಬಳಸುತ್ತಾರೆ. ‘ನಮಗೆ ಕೆಲಸ ನೀಡಿದ್ದಕ್ಕಾಗಿ ಧನ್ಯವಾದಗಳು, ನಾವು ಈಗ ನಿಮ್ಮ ಗುಲಾಮರು’ ಎಂಬ ಈ ಮನೋಭಾವ ನಿಲ್ಲಬೇಕು” ಎಂದು ಒಬ್ಬ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : ಲಿಫ್ಟ್‌ನಲ್ಲೇ ಮೂತ್ರ ವಿಸರ್ಜಿಸಿದ ಬ್ಲಿಂಕಿಟ್ ಡೆಲಿವರಿ ಬಾಯ್‌- ಮುಂದೇನಾಯ್ತು..?: VIDEO

ತಂಡದ ಬಾಂಧವ್ಯವನ್ನು ಗಟ್ಟಿಗೊಳಿಸಲು, ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಕ್ಲೈಂಟ್‌ಗೆ ಖುಷಿ ಮತ್ತು ಸ್ಮರಣೀಯ ಅನುಭವವನ್ನು ನೀಡಲು ಈ ಪ್ರದರ್ಶನವನ್ನು ಉದ್ದೇಶಿಸಲಾಗಿದೆ ಎಂದು ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!