Monday, May 18, 2026
Homeಟಾಪ್ ನ್ಯೂಸ್VIRAL NEWS : ಲಿಫ್ಟ್‌ನಲ್ಲೇ ಮೂತ್ರ ವಿಸರ್ಜಿಸಿದ ಬ್ಲಿಂಕಿಟ್ ಡೆಲಿವರಿ ಬಾಯ್‌- ಮುಂದೇನಾಯ್ತು..?: VIDEO

VIRAL NEWS : ಲಿಫ್ಟ್‌ನಲ್ಲೇ ಮೂತ್ರ ವಿಸರ್ಜಿಸಿದ ಬ್ಲಿಂಕಿಟ್ ಡೆಲಿವರಿ ಬಾಯ್‌- ಮುಂದೇನಾಯ್ತು..?: VIDEO

ಮುಂಬೈ: ಬ್ಲಿಂಕಿಟ್ (Blinkit) ಡೆಲಿವರಿ ಏಜೆಂಟ್ ಒಬ್ಬ ಲಿಫ್ಟ್‌ನಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ ಘಟನೆಯೊಂದು ಮಹಾರಾಷ್ಟ್ರದಲ್ಲಿ (Maharastra) ನಡೆದಿದೆ.

ಮಹಾರಾಷ್ಟ್ರದ ವಿರಾರ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ಲಿಫ್ಟ್‌ನಲ್ಲಿ ಯುವಕ ಮೂತ್ರ ವಿಸರ್ಜಿಸಿದ್ದಾನೆ. ಈ ಘಟನೆಯ ದೃಶ್ಯ ಲಿಫ್ಟ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಲ್ಲದೇ ಯುವಕನ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಸ್ಥಳೀಯರು ಬ್ಲಿಂಕಿಟ್‌ನ ಡೆಲಿವರಿ ಸಮವಸ್ತ್ರ ಧರಿಸಿದ್ದ ಯುವಕನನ್ನು ಹಿಡಿದು ಥಳಿಸಿದ್ದಾರೆ. ನಂತರ ಬೋಲಿಂಗಜ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ವೈರಲ್ ವೀಡಿಯೊದಲ್ಲಿ, ಡೆಲಿವರಿ ಬಾಯ್‌ ಲಿಫ್ಟ್‌ಗೆ ಪ್ರವೇಶಿಸಿ ಒಂದು ಮೂಲೆಗೆ ಸರಿದು ಮೂತ್ರ ವಿಸರ್ಜನೆ ಮಾಡುವುದನ್ನು ಕಾಣಬಹುದಾಗಿದೆ. ಆತನಿಗೆ ಅಲ್ಲಿ ಸಿಸಿಟಿವಿ ಇರುವುದು ಗಮನಕ್ಕೆ ಬಂದಿಲ್ಲ. ಹೀಗಾಗಿ ಯಾರಿಗೂ ಗೊತ್ತಾಗಲ್ಲ ಎಂದುಕೊಂಡು ಅಲ್ಲಿಂದ ಹೋಗಿದ್ದಾನೆ.

ಇನ್ನೊಂದು ವಿಡಿಯೋದಲ್ಲಿ ನಿವಾಸಿಗಳು ಅವನನ್ನು ಪ್ರಶ್ನಿಸುತ್ತಿರುವುದನ್ನು ತೋರಿಸಲಾಗಿದೆ. “ನೀವು ನನ್ನನ್ನು ಯಾಕೆ ಹೊಡೆಯುತ್ತಿದ್ದೀರಿ?” ಎಂದು ಅವನು ಕೇಳಿದಾಗ, ಒಬ್ಬ ನಿವಾಸಿ, “ನೀವು ಲಿಫ್ಟ್ ಒಳಗೆ ಏನು ಮಾಡುತ್ತಿದ್ದಿರಿ? ನಾವು ನಿಮ್ಮ ವಿರುದ್ಧ ಪೊಲೀಸ್ ದೂರು ದಾಖಲಿಸುತ್ತೇವೆ ಎಂದು ಗದರಿಸುವುದನ್ನು ಕೂಡ ಕಾಣಬಹುದಾಗಿದೆ. ಇನ್ನು ಈ ಬಗ್ಗೆ ಬಗ್ಗೆ ಬ್ಲಿಂಕಿಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ : ಲಿಫ್ಟ್ ಬಾಗಿಲು ಮುಚ್ಚಿದ್ದಕ್ಕೆ 12 ವರ್ಷದ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ – ದೂರು ದಾಖಲು – VIDEO

ಈ ತಿಂಗಳ ಆರಂಭದಲ್ಲಿ ಬ್ಲಿಂಕಿಟ್ ಡೆಲಿವರಿ ಏಜೆಂಟ್ ಮೇಲೆ ಆರೋಪವೊಂದು ಕೇಳಿಬಂದಿತ್ತು. ದೆಹಲಿ ಮೂಲದ ಗ್ರಾಹಕರೊಬ್ಬರು ಈ ಆರೋಪ ಮಾಡಿದ್ದು, ಬ್ಲಿಂಕಿಟ್ ಡೆಲಿವರಿ ಏಜೆಂಟ್ ತಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೇ ನೀವು ಎಲ್ಲಿ ವಾಸಿಸುತ್ತೀರಿ ಎಂದು ನನಗೆ ತಿಳಿದಿದೆ ಎಂದು ಫೋನಿನಲ್ಲಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಆ ನಂತರ ಅದೇ ಏಜೆಂಟ್ ಕೆಲವೇ ನಿಮಿಷಗಳಲ್ಲಿ 15 ಕ್ಕೂ ಹೆಚ್ಚು ಫೋನ್ ಕರೆಗಳನ್ನು ಮಾಡಿ, ಅವಾಚ್ಯ ಶಬ್ದಗಳನ್ನು ಬಳಸಿ ಕಿರುಕುಳ ನೀಡಿದ್ದಾರೆ ಎಂದು ಗ್ರಾಹಕ ಆರೋಪಿಸಿದ್ದರು.

ಕೇವಲ ಹತ್ತು ನಿಮಿಷಗಳಲ್ಲಿ ವಸ್ತುಗಳನ್ನು ಮನೆಗಳಿಗೆ ತಲುಪಿಸುವಂತಹ ಕ್ವಿಕ್ ಕಾಮರ್ಸ್ ಕಂಪನಿಗಳ ಪೈಕಿ ಬ್ಲಿಂಕಿಟ್ ಅತಿಹೆಚ್ಚು ಯಶಸ್ಸು ಗಳಿಸಿದೆ. ದೇಶಾದ್ಯಂತ 1,544 ಸ್ಟೋರ್​ಗಳಿವೆ. ಏಪ್ರಿಲ್​ನಿಂದ ಜೂನ್​ವರೆಗಿನ ಒಂದೇ ಕ್ವಾರ್ಟರ್​ನಲ್ಲಿ 243 ಹೊಸ ಸ್ಟೋರ್​ಗಳ ಸ್ಥಾಪನೆಯಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!