Monday, April 13, 2026
Homeಟಾಪ್ ನ್ಯೂಸ್VIJAYENDRA : ಪಿಎಂ ಮೋದಿ ಭೇಟಿಯಾದ ಬಿಎಸ್ವೈ ಪುತ್ರರು! ಕುಟುಂಬದ ಮದ್ವೆಗೆ ಆಮಂತ್ರಣ

VIJAYENDRA : ಪಿಎಂ ಮೋದಿ ಭೇಟಿಯಾದ ಬಿಎಸ್ವೈ ಪುತ್ರರು! ಕುಟುಂಬದ ಮದ್ವೆಗೆ ಆಮಂತ್ರಣ

ನವದೆಹಲಿ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಶಿವಮೊಗ್ಗ ಸಂಸದ ರಾಘವೇಂದ್ರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದು, ಜೂನ್ ನಲ್ಲಿ ನಡೆಯುವ ಕುಟುಂಬದ ಮದುವೆಗೆ ಆಹ್ವಾನ ನೀಡಿದ್ದಾರೆ.

ಬಿಎಸ್ ವೈ ಹಿರಿಯ ಪುತ್ರ ರಾಘವೇಂದ್ರ ಅವರ ಮಗ ಸುಭಾಷ್‌ ಮತ್ತು ಶ್ರಾವಣಾ ವಿವಾಹ ಜೂನ್ ನಲ್ಲಿ ನಿಗದಿಯಾಗಿದೆ. ಇಬ್ಬರ ನಿಶ್ಚಿತಾರ್ಥ ಸೋಮವಾರ ಕಲಬುರಗಿಯ ಖಾಸಗಿ ನಡೆದಿತ್ತು. ಇದೀಗ ಪಿಎಂ ಮೋದಿಗೆ ಆಮಂತ್ರಣ ನೀಡಲಾಗಿದೆ.

ಇನ್ನು, ಪಿಎಂ ಭೇಟಿಯಾಗಿರೋ ವಿಜಯೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಂತಸದ ಕ್ಷಣದ ಫೋಟೋ ಹಂಚಿಕೊಂಡಿದ್ದಾರೆ.

ವಿಜಯೇಂದ್ರ ಪೋಸ್ಟ್ ನಲ್ಲಿ ಏನಿದೆ..?

ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರನ್ನು ನವದೆಹಲಿಯಲ್ಲಿಂದು ಭೇಟಿಯಾಗಿ ನಮ್ಮ ಕುಟುಂಬದ ವಿವಾಹ ಮಹೋತ್ಸವಕ್ಕೆ ಪ್ರೀತಿ ಹಾಗೂ ಅಭಿಮಾನ ಪೂರ್ವಕವಾಗಿ ಆಹ್ವಾನಿಸಿದೆವು. ವಿಕಸಿತ ಭಾರತದ ಮಹಾಸಂಕಲ್ಪ ತೊಟ್ಟು ತಪಸ್ವಿ ಸಾಧಕರಂತೆ ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಪ್ರಧಾನಿ ಮೋದಿಜೀ ಅವರು ನಮ್ಮಂತಹ ಕಾರ್ಯಕರ್ತರಿಗೆ ಯುಕ್ತ ಚೈತನ್ಯದ ಪ್ರೇರಣೆಯ ವ್ಯಕ್ತಿಯಾಗಿದ್ದಾರೆ. ಅವರ ಮಾರ್ಗದರ್ಶನ ಆಶೀರ್ವಾದ ಅದಮ್ಯ ಉತ್ಸಾಹ ತುಂಬಲಿದೆ ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!