ವಿಜಯಪುರದ (Vijayapura) ಸಿಂದಗಿ ಪಟ್ಟಣದ ಆನಂದ್ ಟಾಕೀಸ್ ಬಳಿ ಪತ್ನಿ ಮೇಲೆ ಮಚ್ಚಿನಿಂದ (Crime) ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ತಡೆಯಲು ಬಂದ ಸಾರ್ವಜನಿಕರಿಗೆ ಅವಾಚ್ಯ ಶಬ್ದದಿಂದ ನಿಂದಿಸಿರುವ ಘಟನೆ ನಡೆದಿದೆ.
ಹಲ್ಲೆ ನಡೆಸಿದ ಪಾಪಿ ಪತಿಯನ್ನು ಸಿಂದಗಿ ತಾಲೂಕಿನ ಗ್ರಾಮದ ಯಮನಪ್ಪ ಮಾದರ್ (60) ಎಂದು ಗುರುತಿಸಲಾಗಿದೆ. ವಿಜಯಪುರದ ಸಿಂದಗಿ ಪಟ್ಟಣದ ಆನಂದ್ ಟಾಕೀಸ್ ಬಳಿ ಯಾವುದೋ ಕಾರಣಕ್ಕೆ ಯಮನಪ್ಪ ಪತ್ನಿ ಅನಸುಯಾ ಮಾದಾರ್ (50) ಮೇಲೆ ಹಲ್ಲೆ ನಡೆಸಿದ್ದಾನೆ.
ಬೇಡ ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದರೂ ಕೂಡ ಕೇಳದೆ ಪತ್ನಿ ಮೇಲೆ ನಡು ರಸ್ತೆಯಲ್ಲೇ ಕಲ್ಲು ಹಾಗೂ ಕಬ್ಬಿಣದ ರಾಡ್ ನಿಂದ ಮನಸ್ಸೋಇಚ್ಛೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಸಾರ್ವಜನಿಕರು ತಡೆಯಲು ಮುಂದಾಗಿದ್ದಾರೆ, ಇದರಿಂದ ಸಿಟ್ಟಾದ ಯಮನಪ್ಪ ಅವರಿಗೂ ಕೂಡ ಅವಾಜ್ ಹಾಕಿ ಕಲ್ಲು ಹಾಗೂ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ.
ಕೂಡಲೇ ಎಚ್ಚೆತ್ತ ಸಾರ್ವಜನಿಕರು ಯಮನಪ್ಪನನ್ನು ಹಿಡಿದು ಆತನಿಗೂ ಥಳಿಸಿದ್ದಾರೆ. ಸದ್ಯ ಗಾಯಗೊಂಡ ಪತಿ ಹಾಗೂ ಪತ್ನಿ ಇಬ್ಬರು ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆಗೆ ಕಾರಣವೇನು ಅನ್ನೋದರ ಬಗ್ಗೆ ತನಿಖೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ‘ಆ ಪೊಲೀಸ್ 4 ಬಾರಿ ಅತ್ಯಾ*ಚಾರ ಮಾಡಿದ್ದಾರೆ’ – ಮೃತ ವೈದ್ಯೆ ಅಂಗೈ ಮೇಲೆ ಡೆತ್‌ನೋಟ್!
ಆಸ್ತಿ ವಿಚಾರಕ್ಕೆ ಮಗನೊಡನೆ ಕಿರಿಕ್ – ಬುರುಡೆಗೆ ಗುಂಡು ಹಾರಿಸಿದ ಅಪ್ಪ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಆಸ್ತಿಯ ವಿಚಾರಕ್ಕೆ ಮಗನ ಮೇಲೆ ತಂದೆ ಗುಂಡು ಹಾರಿಸಿದ ಘಟನೆ ದೊಡ್ಡಬಳ್ಳಾಪುರದ ನಡೆದಿದೆ.
ಗಾಯಗೊಂಡ ಮಗನನ್ನು ಹರೀಶ್ (28) ಎಂದು ಗುರುತಿಸಲಾಗಿದೆ. ಹರೀಶ್ ಹಾಗೂ ತಂದೆ ಸುರೇಶ್ (49)ರ ನಡುವೆ ಯಾವಾಗಲೂ ಆಸ್ತಿ ವಿಚಾರಕ್ಕೆ ಗಲಾಟೆಯಾಗುತ್ತಾ ಇತ್ತು. ಅಲ್ಲದೇ ಒಂದೆರಡು ಬಾರಿ ಕೈ ಕೂಡ ಮುಲಾಯಿಸಿದ್ದರು.
ಅಲ್ಲದೇ ಮಗ ಹರೀಶ್ ಗೆ ಸದಾ ಕುಡಿಯುವ ಚಟ ಕೂಡ ಇತ್ತು, ಎಲ್ಲಿ ಕುಡಿಯುವುದಕ್ಕೆ ಆಸ್ತಿ ಮಾರಾಟ ಮಾಡುತ್ತಾನೋ ಎಂಬ ಭಯದಿಂದ ಆಸ್ತಿಯನ್ನು ಮಗನ ಹೆಸರಿಗೆ ಮಾಡಿರಲಿಲ್ಲ.
ಇದೇ ವಿಚಾರಕ್ಕೆ ತಂದೆ ಮಗನ ನಡುವೆ ದಿನನಿತ್ಯ ಗಲಾಟೆಯಾಗುತ್ತಿತ್ತು. ಇದೀಗ ಕುಡಿದು ನಿನ್ನೆ ಕೂಡ ಹರೀಶ್ ಕುಡಿದು ಬಂದು ಗಲಾಟೆ ಮಾಡಿದ್ದು, ಈ ವೇಳೆ ಗಲಾಟೆ ವಿಕೋಪಕ್ಕೆ ತೆರಳಿ ನಾಡ ಬಂದೂಕಿನಿಂದ ಮಗ ಹರೀಶ್ ತಲೆಗೆ ಗುಂಡು ಹಾರಿಸಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ಗುಂಡು ಹಾರಿಸಿದ ಪರಿಣಾಮ ಹರೀಶ್ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.