ಭಾರತದ ಬ್ಯಾಂಕ್‌ಗಳಿಗೆ ಕೋಟ್ಯಾಂತರ ರೂ.ಗಳನ್ನು ವಂಚಿಸಿ ವಿದೇಶಿಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಬಳಿ ಬ್ಯಾಂಕ್‌ಗಳ ಸಾಲ ಮರುಪಾವತಿಸಲು ಬೇಕಾದಷ್ಟು ಆಸ್ತಿ ಇತ್ತು, ಆದರೆ ಸಾಲ ಮರುಪಾವತಿ ಮಾಡುವ ಬದಲಾಗಿ ವಿದೇಶದಲ್ಲಿ ಆಸ್ತಿ ಖರೀದಿಸಿದರು ಎಂದು ಸಿಬಿಐ ಹೇಳಿದೆ.
ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಮೂರನೇ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದ್ದು, 2017ರ ಆಗಸ್ಟ್‌ನಲ್ಲಿ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರ ಬಳಿ 7500 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಸ್ವಿಸ್ ಬ್ಯಾಂಕ್ ಅಂದಾಜಿಸಿತ್ತು, ಆ ಆಸ್ತಿಯಲ್ಲಿ ಬ್ಯಾಂಕ್‌ಗಳ ಸಾಲ ತೀಸಿರಬಹುದಿತ್ತು ಎಂದು ಸಿಬಿಐ ಹೇಳಿದೆ.
2015-16ರ ಅವಧಿಯಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್ ನಗದು ಕೊರತೆಯನ್ನು ಎದುರಿಸುತ್ತಿದ್ದಾಗ ಉದ್ಯಮಿ ವಿಜಯ ಮಲ್ಯ ಇಂಗ್ಲೆಂಡ್ ಮತ್ತು ಫ್ರಾನ್ಸ್‌ನಲ್ಲಿ 330 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಸಿಬಿಐ ಹೇಳಿದೆ.
900 ಕೋಟಿಗೂ ಹೆಚ್ಚು ಮೊತ್ತದ ಐಡಿಬಿಐ ಬ್ಯಾಂಕ್-ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲ ವಂಚನೆ ಪ್ರಕರಣದಲ್ಲಿ ವಿಜಯ ಮಲ್ಯ ಆರೋಪಿಯಾಗಿದ್ದು, ಪ್ರಕರಣ ಸಂಬಂಧ ಸಿಬಿಐ ಇತ್ತೀಚೆಗೆ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ.
ಮಲ್ಯ ಬಳಿ ಸಾಕಷ್ಟು ಹಣವಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸುಮಾರು 44 ಮದ್ಯ ಘಟಕಗಳನ್ನು ಸ್ಥಾಪಿಸಿದ್ದಾರೆ, ಅದರ ಮೂಲಕ ಯುರೋಪಿನಾದ್ಯಂತ ಹಲವಾರು ಆಸ್ತಿಗಳನ್ನು ಗಳಿಸಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ.