Sunday, June 7, 2026
Homeಬೆಂಗಳೂರುಮೇ 10, 13ಕ್ಕೆ ನಿಗದಿಯಾಗಿದ್ದ ಶುಭ ಸಮಾರಂಭಗಳಿಗೆ ವಿಧಾನ ಸಭಾ ಚುನಾವಣೆ ಎಫೆಕ್ಟ್‌!

ಮೇ 10, 13ಕ್ಕೆ ನಿಗದಿಯಾಗಿದ್ದ ಶುಭ ಸಮಾರಂಭಗಳಿಗೆ ವಿಧಾನ ಸಭಾ ಚುನಾವಣೆ ಎಫೆಕ್ಟ್‌!

ಬೆಂಗಳೂರು : ಕರ್ನಾಟಕ ವಿಧಾನಸಭೆಗೆ ಚುನಾವಣೆ ಮೇ.10ಕ್ಕೆ ನಡೆಯಲಿದ್ದು, ಮೇ.13ರಂದು ಮತ ಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮದುವೆ, ಶುಭ ಸಮಾರಂಭಗಳಿಗೆ ಭಾರೀ ಎಫೆಕ್ಟ್‌ ಆಗಲಿದೆ.

ಚುನಾವಣೆ ಇರುವ ಕಾರಣಕ್ಕಾಗಿ ಅದೇಷ್ಟೋ ಜನರು ಮದುವೆ ಸಮಾರಂಭಕ್ಕೆ ಬರಲು ಹಿಂದೇಟು ಹಾಕುತ್ತಾರೆ, ಅಲ್ಲದೇ, ಊರಿಂದ ಊರಿಗೆ ತೆರಳಬೇಕಾದವರಿಗೂ ಸಂಕಷ್ಟ ಎದುರಾಗಿದೆ. ವಿಧಾನ ಸಭಾ ಚುನಾವಣೆ ಸಂದರ್ಭದಲ್ಲೇ ಡೇಟ್‌ ಫಿಕ್ಸ್‌ ಆಗಿದ್ದ ಮದುವೆ, ಶುಭ ಸಮಾರಂಭಗಳ ನಡೆಯುವ ಕುಟುಂಬಗಳಿಗೆ ಹೊಸ ತಲೆನೋವು ಶುರುವಾಗಿದೆ. ಸುಮಾರು ದಿನಗಳ ಹಿಂದೆಯೇ ಮದುವೆ ದಿನಾಂಕಗಳು ನಿಗದಿಯಾಗಿತ್ತು ಆದ್ರೆ ಇದೀಗ ಚುನಾವಣಾ ಡೇಟ್‌ ಫಿಕ್ಸ್‌ ಆದಾಗಿನಿಂದ ಮದುವೆ ಸಮಾರಂಭಗಳ ದಿನಾಂಕವೂ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಮದುವೆಗೆ, ಶುಭಸಮಾರಂಭಗಳಿಗೆ ಹೊಸ ದಿನಾಂಕಕ್ಕೆ ಮದುವೆ ಸ್ಥಳ ಹುಡುಕುವುದು, ಫೋಟೋಗ್ರಾಫರ್‌ ಗೊತ್ತು ಮಾಡುವುದು ಮತ್ತೊಂದು ಕಷ್ಟ. ಇದರಿಂದ ಮದುವೆ ದಿನಾಂಕ ನಿಗದಿ ಮಾಡಿದವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!