ಲಾಹೋರ್: ಪಾಕಿಸ್ತಾನ ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪರಿಹಾರ ನಿಧಿಗಾಗಿ ಎದುರು ನೋಡುತ್ತಿದೆ. ಇದೇ ಸಂದರ್ಭ ಮತ್ತೊಂದೆಡೆ ಆ ದೇಶದ ದಾರುಣ ವ್ಯವಸ್ಥೆಗೆ ಉದಾಹರಣೆ ಎಂಬಂತೆ ವಿಡಿಯೊ ಒಂದು ಹರಿದಾಡುತ್ತಿದೆ.
ರಮಝಾನ್ ತಿಂಗಳ ಹಿನ್ನೆಲೆಯಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಬಡವರಿಗೆ ಉಚಿತ ಆಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ನಡೆಯುತ್ತಿದೆ.
ಈ ಕಾರ್ಯಕ್ರಮದಂಗವಾಗಿ ಗೋಧಿ ಹಿಟ್ಟನ್ನು ಸಾಗಿಸುತ್ತಿದ್ದ ಟ್ರಕ್ ಹಿಂದೆ ಜನರು ಓಡುತ್ತಿರುವ, ಟ್ರಕ್ ಗೆ ಹತ್ತುತ್ತಿರುವ ವಿಡಿಯೊ ಇದಾಗಿದೆ. ಆಹಾರ ಸಾಮಗ್ರಿ ನಿಗದಿತ ಸ್ಥಳ ತಲುಪುವ ಮೊದಲೇ ಅದನ್ನು ಲೂಟಿಗೈಯಲಾಗಿದೆ ಎಂದು ವರದಿಯಾಗಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.