Friday, December 5, 2025
Homeಕ್ರೈಂVIRAL NEWS: ದುಪ್ಪಟ್ಟು ದರ ವಸೂಲಿ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನ ಮೇಲೆ ರೈಲು ಸಿಬ್ಬಂದಿ ಹಲ್ಲೆ: VIDEO

VIRAL NEWS: ದುಪ್ಪಟ್ಟು ದರ ವಸೂಲಿ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನ ಮೇಲೆ ರೈಲು ಸಿಬ್ಬಂದಿ ಹಲ್ಲೆ: VIDEO

ಮುಂಬೈ: ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ ಪ್ರಯಾಣಿಕನಿಗೆ ರೈಲ್ವೇ ನಿರ್ವಹಣಾ ಸಿಬ್ಬಂದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.

ಋಷಿಕೇಶದಿಂದ ವೈಷ್ಣೋದೇವಿಗೆ ತೆರಳುವ ಹೇಮಕುಂಟ್ ಎಕ್ಸ್​ಪ್ರೆಸ್ ರೈಲು 14609ರಲ್ಲಿ ಈ ಘಟನೆ ನಡೆದಿದೆ. ಎಸಿ ಕೋಚ್​ನಲ್ಲಿ ರೈಲ್ವೇ ನಿರ್ವಹಣಾ ಸಿಬ್ಬಂದಿಯೋರ್ವ ತನ್ನ ಸಹ ಸಿಬ್ಬಂದಿಯೊಂದಿಗೆ ಸೇರಿ ಹಲ್ಲೆ ಮಾಡಿದ್ದಾನೆ.

ಪ್ರಯಾಣಿಕ ಊಟಕ್ಕೆ ಆರ್ಡರ್ ಮಾಡಿದ್ದ. ಆದರೆ ನಿಗದಿತ ಊಟದ ದರಕ್ಕಿಂತ ದುಪ್ಪಟ್ಟು ದರ ವಸೂಲಿ ಮಾಡಲಾಗಿತ್ತು. ಅದನ್ನು ಪ್ರಯಾಣಿಕ ಪ್ರಶ್ನೆ ಮಾಡಿದ್ದ. ಅಲ್ಲದೆ ಹೆಚ್ಚುವರಿ ಹಣ ಪಡೆದಿದ್ದನ್ನು ವಿಡಿಯೋ ಮಾಡುತ್ತಿದ್ದ. ಅದನ್ನು ಗಮನಿಸಿದ ರೈಲ್ವೇ ಸಿಬ್ಬಂದಿ ರೊಚ್ಚಿಗೆದ್ದು, ತನ್ನ ಸಹ ಸಿಬ್ಬಂದಿಯನ್ನು ಕರೆಸಿಕೊಂಡು ಮೇಲಿನ ಬರ್ತ್​ನಲ್ಲಿದ್ದ ಪ್ರಯಾಣಿಕನಿಗೆ ಥಳಿಸಿದ್ದಾನೆ.

ರೈಲ್ವೇ ಸಿಬ್ಬಂದಿ ದಾಳಿಯಿಂದ ಪ್ರಯಾಣಿಕನಿಗೆ ಗಾಯಗಳಾಗಿವೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ರೈಲ್ವೇ ಇಲಾಖೆ ಇಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!