ಬೆಂ.ದಕ್ಷಿಣ: ಇಂದು (ಮಾ.13) ನಗರದ ವಂಡರ್‌ಲಾ ರೆಸಾರ್ಟ್‌ನಲ್ಲಿ ಒಡಿಶಾದ (Odisha) ಕಾಂಗ್ರೆಸ್ ಶಾಸಕರು (Congress MLAs) ತಂಗಿದ್ದ ಸ್ಥಳಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ವೀರಪ್ಪನ್ ಪುತ್ರಿ ವಿದ್ಯಾ ವೀರಪ್ಪನ್ (Vidya veerappan) ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಸಮಸ್ಯೆಗೆ ಪರಿಹಾರ ಕಾಲವೇ ನಿರ್ಣಯ ಮಾಡುತ್ತೆ: ಡಿಕೆಶಿ ಮಾರ್ಮಿಕ ಮಾತು
ಡಿಸಿಎಂ ಡಿಕೆಶಿ ಬರುವ ಮುನ್ನವೇ ರೆಸಾರ್ಟ್ ಆವರಣದಲ್ಲಿ ವಿದ್ಯಾ ತಮ್ಮ ಬೆಂಬಲಿಗರೊಂದಿಗೆ ಡಿಕೆ ಆಗಮನಕ್ಕಾಗಿ ನಿರೀಕ್ಷೆಯಿಂದ ಕಾಯುತ್ತಿದ್ದರು. ಆ ಬಳಿಕ ಡಿಕೆ ಶಿವಕುಮಾರ್ ವಾಹನದಿಂದ ಇಳಿದಾಗ ಸ್ಥಳೀಯ ಕಾಂಗ್ರೆಸ್ ನಾಯಕರು ಅವರನ್ನು ಸುತ್ತುವರಿದರು. ಇದೇ ಸಂದರ್ಭದಲ್ಲಿ ಒಬ್ಬ ನಾಯಕ ವಿದ್ಯಾ ವೀರಪ್ಪನ್ ಅವರನ್ನು ಅವರ ಬಳಿ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು.
ಮೊದಲಿಗೆ ಸೌಜನ್ಯವಾಗಿ ಒಂದು ಫೋಟೊ ನೀಡಿ ನಮಸ್ಕರಿಸಿದ ವಿದ್ಯಾ ತಮ್ಮ ಭೇಟಿಯ ಉದ್ದೇಶ ವಿವರಿಸಲು ಯತ್ನಿಸಿದರು. ಆದರೆ ನಂತರ ಮಾತನಾಡೋಣ ಎಂಬ ಸೂಚನೆ ನೀಡಿ ಶಿವಕುಮಾರ್ ಒಳಗೆ ತೆರಳಿದರು. ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುರಿತು ಚರ್ಚಿಸಲು ವಿದ್ಯಾ ಡಿಕೆ ಭೇಟಿ ಮಾಡಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ.