ಕುಖ್ಯಾತ ದಂತಚೋರ ವೀರಪ್ಪನ್ ಎರಡನೇ ಪುತ್ರಿ ವಿಜಯಲಕ್ಷಿ ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದ್ದು ಹಳೆಯ ಸುದ್ದಿ. ಈಗ ಆ ಸಿನಿಮಾದ ಗೀತೆಗಳು ಬಿಡುಗಡೆಯಾಗಿದ್ದು, ಮಾವೀರನ್ ಪಿಳ್ಳೆ ಎಂಬುದು ಸಿನಿಮಾ ಶೀರ್ಷಿಕೆ. ಮದ್ಯಪಾನದಿಂದುಂಟಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಸಿನಿಮಾ ಇದಾಗಿದೆ ಎಂದು ನಿರ್ದೇಶಕ ಪೇರರಸು ಹೇಳಿಕೊಂಡಿದ್ದಾರೆ. ವೀರಪ್ಪನ ಪುತ್ರಿ ವಿಜಯ ಲಕ್ಷ್ಮಿಯೂ ಸಹ, ಇದೇ ಕಾರಣದಿಂದಾಗಿ ನಾನು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೆ. ಕುಡಿತದ ಚಟದಿಂದಾಗಿ ಹಲವು ಸಂಸಾರಗಳು ಹಾಳಾಗುತ್ತಿವೆ. ಕುಡಿತದ ದುಷ್ಪರಿಣಾಮಗಳ ಬಗ್ಗೆ ಈ ಸಿನಿಮಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಖಂಡಿತಾ ಯಶಸ್ವಿಯಾಗಲಿದೆ ಎಂದಿದ್ದಾರೆ. ಈ ಸಿನಿಮಾದಲ್ಲಿ ಕುಡಿತದ ದುಷ್ಪರಿಣಾಮದ ಬಗ್ಗೆಯೇ “ಸಾರಾಯಂ ಅಭಯಂ” ಎಂಬ ಗೀತೆಯನ್ನು ರಚಿಸಲಾಗಿದೆ.
ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಯುವ ಘಟಕದ ಮುಖ್ಯಸ್ಥೆಯೂ ಸಹ ಆಗಿದ್ದಾರೆ.