Monday, April 13, 2026
Homeಟಾಪ್ ನ್ಯೂಸ್GUJARAT: ಸೇತುವೆ ಕುಸಿತ ಘನಘೋರ ಪ್ರಕರಣ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

GUJARAT: ಸೇತುವೆ ಕುಸಿತ ಘನಘೋರ ಪ್ರಕರಣ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಗುಜರಾತ್: ಇಲ್ಲಿನ ವಡೋದರ ಜಿಲ್ಲೆಯ ಪಾದರಾ ಎಂಬಲ್ಲಿ ಮಹಿಸಾಗರ ಎಂಬ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇವುತೆ ನಿನ್ನೆ (ಜು.9) ಕುಸಿದು ಬಿದ್ದಿದ್ದು,ಈ ಭೀಕರ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಇಲ್ಲಿನ ಮಹಿಸಾಗರ ಎಂಬ ನದಿಗೆ ನಿರ್ಮಿಸಲಾಗಿದ್ದ ಸೇತುವೆಯಲ್ಲಿ ಈ ಮುನ್ನ ಸಾಕಷ್ಟು ಬಿರುಕು ಕಾಣಿಸಿಕೊಂಡಿತ್ತು.ಆ ಬಳಿಕವೂ ದಿವ್ಯ ನಿರ್ಲಕ್ಷ್ಯದ ಫಲವಾಗಿ ಸೇತುವೆ ಕುಸಿದುಬಿದ್ದ ಕಾರಣ,ಹಲವು ವಾಹನಗಳು ನದಿಗೆ ಬಿದ್ದು ಮುಳುಗಡೆಯಾಗಿದ್ದವು.ಈ ವಾಹನಗಳನ್ನು ಹೊರತೆಗೆಯುವ ಮತ್ತು ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರೆದಿದೆ.

ಈ ದುರಂತದಲ್ಲಿ ಈಗಾಗಲೇ ಸಾವಿನ ಸಂಖ್ಯೆ 15 ಕ್ಕೆ ಏರಿಕೆಯಾಗಿದ್ದು,ಇನ್ನೂ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಘಟನೆದ ನಡೆದ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತನಿಖೆಗೆ ಆದೇಶಿಸಿದ್ದಾರೆ.ಮತ್ತೊಂದೆಡೆ ಈ ಘಟನೆಯ ಬಗ್ಗೆ ಪ್ರಧಾನಿ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದು ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!