Wednesday, August 19, 2026
Homeಟಾಪ್ ನ್ಯೂಸ್ʼಪಕ್ಷದ ಮಾತು ಕೇಳಿದೆʼ: ಸೋಲಿನ ಕುರಿತು ಸೋಮಣ್ಣ

ʼಪಕ್ಷದ ಮಾತು ಕೇಳಿದೆʼ: ಸೋಲಿನ ಕುರಿತು ಸೋಮಣ್ಣ

ಬೆಂಗಳೂರು: ಎರಡು ಕ್ಷೇತ್ರಗಳಲ್ಲಿ ನಿಂತು ಎರಡರಲ್ಲೂ ಸೋತಿರುವ ವಿ. ಸೋಮಣ್ಣ ಅವರು ತಮ್ಮ ಸೋಲಿನ ಕುರಿತು ಪ್ರತಿಕ್ರಿಯಿಸಿದ್ದಾರೆ.

ಹೈಕಮಾಂಡ್‌ ಸೂಚಿಸಿದಕ್ಕೆ ಗೋವಿಂದರಾಜನಗರ ಬಿಟ್ಟು ಬೇರೆಡೆ ಸ್ಪರ್ಧಿಸಿದ್ದೆ, ನನ್ನ ಕ್ಷೇತ್ರ ಚಿನ್ನದಂತೆ ಇತ್ತು ಎಂದು ಹೇಳಿದ್ದಾರೆ.

ʼಸೋತಾಗಿದೆ, ಏನು ಮಾತನಾಡಲಿ ? ಮಾತನಾಡುವುದು ಅಗತ್ಯ ಇಲ್ಲ, ಸೋತಿದ್ದೇನೆ ಅಷ್ಟೆ. ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದೆʼ ಎಂದು ಹೇಳಿದ ಅವರು, ʼಇದನ್ನು ಚಾಲೆಂಜ್ ಆಗಿ ತೆಗೆದುಕೊಂಡೆ, ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನಈ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳಿತು ಅಂತ ಹೋದೆʼ ಎಂದು ಹೇಳಿದ್ದಾರೆ.

ಜನ ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಎಂದು ಬಿಜೆಪಿ ನಾಯಕ ವಿ. ಸೋಮಣ್ಣ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!