Saturday, March 15, 2025
Homeಟಾಪ್ ನ್ಯೂಸ್MONALISA: ವೈರಲ್‌ ಬೆಡಗಿ ಮೊನಾಲಿಸಾಳನ್ನು ಹೀರೋಯಿನ್ ಮಾಡ್ತೀನಿ ಅಂದಿದ್ದ ನಿರ್ದೇಶಕನ ವಿರುದ್ಧ ಗಂಭೀರ ಆರೋಪ

MONALISA: ವೈರಲ್‌ ಬೆಡಗಿ ಮೊನಾಲಿಸಾಳನ್ನು ಹೀರೋಯಿನ್ ಮಾಡ್ತೀನಿ ಅಂದಿದ್ದ ನಿರ್ದೇಶಕನ ವಿರುದ್ಧ ಗಂಭೀರ ಆರೋಪ

ಮುಂಬೈ: ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ಅಂದದ ಕಣ್ಣುಗಳಿಂದಲೇ ವೈರಲ್ ಆದ ಹುಡುಗಿ ಮೊನಾಲಿಸಾಗೆ ಇದೀಗ ಸಮಸ್ಯೆ ಎದುರಾಗಿದೆ. ಮೊನಾಲಿಸಳನ್ನು ಬಾಲಿವುಡ್ ಹೀರೋಯಿನ್ ಮಾಡ್ತೀನಿ ಅಂತ ಅಂದಿದ್ದ ನಿರ್ದೇಶಕ ಸನೋಜ್ ಮಿಶ್ರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ.

ನಿರ್ಮಾಪಕ ಜಿತೇಂದ್ರ ನಾರಾಯಣ ಸೆಂಗರ್ ಮನಾಲಿಸಾಲನ್ನು ಚಿತ್ರದ ನಾಯಕಿ ಮಾಡುತ್ತೇನೆ ಎಂದಿದ್ದ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ತನ್ನ ಸುಂದರ ಕಣ್ಣುಗಳಿಂದ ಜನಪ್ರಿಯಗೊಂಡಿದ್ದ ಮೊನಲಿಸಳನ್ನು ʼದೀ ಡೈರಿ ಆಫ್ ಮಣಿಪುರʼ ಚಿತ್ರದ ನಾಯಕಿಯನ್ನಾಗಿ ಮಾಡೋದಾಗಿ ಹೇಳಿಕೊಂಡಿದ್ದರು. ಇದೀಗ ಮಿಶ್ರಾ ವಿರುದ್ಧ ನಿರ್ಮಾಪಕ ಜಿತೇಂದ್ರ ಹಲವು ಆರೋಪ ಮಾಡಿದ್ದಾರೆ. ಸನೋಜ್ ಮಿಶ್ರಾ ಹಲವು ಸಿನಿಮಾಗಳನ್ನು ನಿರ್ಮಿಸುವ ಬಗ್ಗೆ ಹೇಳಿಕೊಂಡಿದ್ದರು, ಆದರೆ ಅವರ ಒಂದು ಸಿನಿಮಾ ಕೂಡ ಬಿಡುಗಡೆಯಾಗಿಲ್ಲ ಮತ್ತು ಯಾವುದೇ ಗಳಿಕೆಯನ್ನು ಹೊಂದಿಲ್ಲ ಎಂದು ಜಿತೇಂದ್ರ ನಾರಾಯಣ್ ಸೇಂಗರ್ ಹೇಳಿದ್ದಾರೆ.

ಮೊನಾಲಿಸಾ ಕುಟುಂಬ ತುಂಬಾ ಮುಗ್ಧ. ಸೀತಾಪುರದಲ್ಲಿ ನಮ್ಮ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು, ಅಲ್ಲಿ ಸನೋಜ್ ಮಿಶ್ರಾ ಸೆಟ್‌ನಲ್ಲಿ ಮದ್ಯಪಾನ ಮಾಡಿ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಜಿತೇಂದ್ರ ನಾರಾಯಣ್ ಸೇಂಗ‌ರ್ ತಿಳಿಸಿದ್ದಾರೆ.

ಸದ್ಯ ಜಿತೇಂದ್ರ ಅವರ ಹೇಳಿಕೆಗಳು ವೈರಲ್ ಆಗಿದ್ದು ಜನ ಮೊನಾಲಿಸ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!