Saturday, January 25, 2025
Homeಟಾಪ್ ನ್ಯೂಸ್ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ವಿವಾದ : ರಮ್ಯಾ ಪರ ತೀರ್ಪು

ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ವಿವಾದ : ರಮ್ಯಾ ಪರ ತೀರ್ಪು

ಬೆಂಗಳೂರು: ಬಣ್ಣದ ಗೆಜ್ಜೆ ಸಿನಿಮಾದ ಹಾಡಿನ ಸಾಲನ್ನು ನನ್ನ ಅನುಮತಿ ಇಲ್ಲದೆ ಬಳಸಿ ನಟಿ ರಮ್ಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂಬ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆಕ್ಷೇಪಣೆಗಳನ್ನು ಸಿಟಿ ಸಿವಿಲ್ ಕೋರ್ಟ್ ತಳ್ಳಿ ಹಾಕಿದೆ.

ಹಾಡಿನ ಸಾಲುಗಳನ್ನು ಸಿನಿಮಾ ಟೈಟಲ್ ಆಗಿ ಬಳಸಿದರೆ ಅದು ಕಾಪಿರೈಟ್ ಆಗುವುದಿಲ್ಲ. ಈ ಟೈಟಲ್ ಅನ್ನು ರಮ್ಯಾ ಬೇರೆಯವರಿಂದ ಪಡೆದು ಕೊಂಡಿದ್ದಾರೆ. ಆದ್ದರಿಂದ, ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಚಿತ್ರೀಕರಣ ನಡೆಸಬಹುದು ಹಾಗೂ ಬಿಡುಗಡೆಯನ್ನೂ ಮಾಡಬಹುದು ಎಂದು ಆದೇಶಿಸಿದೆ.

ನನ್ನ ಅನುಮತಿ ಇಲ್ಲದೆ ಬಣ್ಣದ ಗೆಜ್ಜೆ ಸಿನಿಮಾದ ಹಾಡನ್ನು ಬಳಸಿ ಸಿನಿಮಾ ನಿರ್ಮಾಣ ಮಾಡುವುದು ಕಾಪಿರೈಟ್ ಉಲ್ಲಂಘನೆ ಎಂದು ರಾಜೇಂದ್ರ ಸಿಂಗ್ ಬಾಬು ಫಿಲ್ಮ್ ಚೇಂಬರ್‌ಗೂ ದೂರು ನೀಡಿದ್ದರು. ನಂತರ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಇದೀಗ ಕೋರ್ಟ್ ತಡೆ ಆದೇಶವನ್ನುತೆರವು ಗೊಳಿಸಿದೆ. ನಟಿ ರಮ್ಯಾ ನಿರ್ಮಾಪಕರಾಗಿ, ರಾಜ್ ಬಿ.ಶೆಟ್ಟಿ ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ತೆರೆಗೆ ಬರಲು ಸಿದ್ಧವಾಗಿತ್ತು. ಏತನ್ಮಧ್ಯೆ, ನಿರ್ದೇಶಕ ರಾಜೇಂದ್ರ ಸಿಂಗ್, ಈ ಟೈಟಲ್ ನನ್ನ ಬಣ್ಣದ ಗೆಜ್ಜೆ ಸಿನಿಮಾದ ಹಾಡಿನ ಸಾಲುಗಳಾಗಿವೆ. ಅವುಗಳನ್ನು ನನ್ನ ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ಆಕ್ಷೇಪಿಸಿದ್ದರು.

ಹೆಚ್ಚಿನ ಸುದ್ದಿ

error: Content is protected !!