ಅಮೆರಿಕ: ಇರಾನ್‌ನ (Iran) ಸೈನಿಕ ವ್ಯವಸ್ಥೆ ಮತ್ತು ಪ್ರಮುಖ ರಕ್ಷಣಾ ಶಕ್ತಿಗಳು ಸಂಪೂರ್ಣವಾಗಿ ದುರ್ಬಲಗೊಂಡಿವೆ ಎಂದು ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ಮಾತುಕತೆ ನಡೆಸುವ ಸಮಯ ಈಗಾಗಲೇ ಕೈಚೆಲ್ಲಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಪ್ರಕಟವಾದ ಲೇಖನದ ವಿವರಣೆಯನ್ನು ಅವರು ತೀವ್ರವಾಗಿ ವಿರೋಧಿಸಿದ್ದಾರೆ.
ಇದನ್ನೂ ಓದಿ : ಈ ಟ್ರಂಪ್ಗೆ ಏನಾಯ್ತು? ಅಮೆರಿಕ ಅಧ್ಯಕ್ಷರಿಗೆ ಕಾಡುತ್ತಿದ್ಯಾ ಚರ್ಮರೋಗ?
ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ, ವಾಯುಪಡೆ, ನೌಕಾಪಡೆ ಹಾಗೂ ನಾಯಕತ್ವ ವ್ಯವಸ್ಥೆಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಂಡಿವೆ ಎಂದು ಟ್ರಂಪ್ ಹೇಳಿದ್ದಾರೆ. ಈಗ ಇರಾನ್ ಅವರು ನಮ್ಮ ಜೊತೆ ಮಾತುಕತೆ ಬಯಸುತ್ತಿದ್ದಾರೆ, ಆದರೆ ಈಗಾಗಲೇ ತುಂಬಾ ತಡವಾಗಿದೆ ಎಂದು ಇರಾನ್ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಅಮೆರಿಕದ ಬಳಿ ಮಧ್ಯಮದಿಂದ ಉನ್ನತ ಮಟ್ಟದವರೆಗೆ ಅಪಾರ ಶಸ್ತ್ರಾಸ್ತ್ರ ಸಾಮರ್ಥ್ಯವಿದೆ ಎಂದು ಇರಾನ್ ಗೆ ಟಾಂಗ್ ಕೊಟ್ಟಿದ್ದಾರೆ.