ಇರಾನ್: ಅಮೆರಿಕದೊಂದಿಗಿನ (America) ಒಪ್ಪಂದದಿಂದ ಹಿಂದೆ ಸರಿಯಲು ಇರಾನ್ (Iran) ಕೈಗೊಂಡಿರುವ ತೀರ್ಮಾನದ ಬಗ್ಗೆ ತಮಗೆ ಯಾವುದೇ ರೀತಿಯ ಕಾಳಜಿಯಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಸ್ಪಷ್ಟಪಡಿಸಿದ್ದಾರೆ. ಇರಾನ್‌ನ ಈ ಹೆಜ್ಜೆಯಿಂದ ವಾಷಿಂಗ್ಟನ್‌ನ ಪ್ರಸ್ತುತ ಧೋರಣೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಮತ್ತು ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಕ್ತಿಯನ್ನು ಹೊಂದದಂತೆ ತಡೆಯುವುದೇ ತಮ್ಮ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ಸ್ ,ಅಮೆರಿಕದ ಎಂಕ್ಯೂ-9 ಹೆಸರಿನ ಡ್ರೋನ್ ಒಂದನ್ನು ಹೊಡೆದುರುಳಿಸಿರುವುದಾಗಿ ಪ್ರಕಟಿಸಿದೆ. ಜೋರ್ಡಾನ್‌ನಲ್ಲಿ ಇಬ್ಬರು ಅಮೆರಿಕ ಸೈನಿಕರ ಸಾವಿಗೆ ಕಾರಣವಾದ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆ ಇರಾನ್ ನೆಲೆಗಳ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ತೀವ್ರಗೊಳಿಸಿದೆ.
ಇದನ್ನೂ ಓದಿ : ಖಮೇನಿ ನಾಪತ್ತೆ.. ಇರಾನ್‌ನಲ್ಲೇ ಇಲ್ಲವೇ ಸರ್ವೋಚ್ಚ ನಾಯಕ ಮೊಜ್ತಾಬಾ?
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮೊಜ್ತಾಬಾ ಖಮೇನಿ, ಅಮೆರಿಕದ ಒಪ್ಪಂದ ಉಲ್ಲಂಘನೆಗಳಿಂದಾಗಿ ಆ ದೇಶದ ಅಧ್ಯಕ್ಷರ ಸಹಿಗೆ ಯಾವುದೇ ಮೌಲ್ಯವಿಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಅಮೆರಿಕ ಸೇನೆ ತನ್ನ ಆಕ್ರಮಣಕಾರಿ ಧೋರಣೆಯನ್ನು ಮುಂದುವರಿಸಿದರೆ ಅವರಿಗೆ ಎಂದಿಗೂ ಮರೆಯಲಾಗದ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.