ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ (America) ಹಾಗೂ ಇರಾನ್ (Iran) ನಡುವಿನ ಮಿಲಿಟರಿ ಸಮರ ಈಗ ಅತ್ಯಂತ ವಿನಾಶಕಾರಿ ಹಂತಕ್ಕೆ ತಲುಪಿದೆ. ಹೊರ್ಮುಜ್ ಜಲಸಂಧಿಯ (Strait Of Hormuz) ಮೂಲಕ ಇರಾನ್ ಬಂದರಿನತ್ತ ಸಾಗಲು ಯತ್ನಿಸುತ್ತಿದ್ದ ಬೃಹತ್ ತೈಲ ಟ್ಯಾಂಕರ್ ಹಡಗೊಂದರ ಮೇಲೆ ಅಮೆರಿಕದ ಸೇನೆ ಭೀಕರ ‘ಹೆಲ್‌ಫೈರ್ ಕ್ಷಿಪಣಿ’ (Hellfire Missiles) ದಾಳಿ ನಡೆಸಿ ಅದನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದೆ.
ಇರಾನ್‌ನ 3 ನಗರಗಳ ಮೇಲೆ ಅಮೆರಿಕದ ಸರಣಿ ಏರ್ ಸ್ಟ್ರೈಕ್!
ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಧಕ್ಕೆ ತರುತ್ತಿರುವ ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಕುಂದಿಸಲು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಎರಡನೇ ತರಂಗದ ಭೀಕರ ವೈಮಾನಿಕ ದಾಳಿಗಳನ್ನು ಮುಂದುವರಿಸಿದೆ.
🛟 Iran has released footage showing the cargo vessel Luni breaking in half and sinking in the Strait of Hormuz
The ship was heading to Jebel Ali in the UAE. The entire crew was rescued. pic.twitter.com/MDqsF89Pog
— NEXTA (@nexta_tv) July 15, 2026
ಈ ದಾಳಿಯ ಬೆನ್ನಲ್ಲೇ ಇರಾನ್‌ನ ಪ್ರಮುಖ ಕರಾವಳಿ ನಗರಗಳಾದ ಕೇಶ್ಮ್ ದ್ವೀಪ (Qeshm Island), ಬಂದರ್ ಅಬ್ಬಾಸ್ ಮತ್ತು ಚಬಹಾರ್‌ಗಳಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಕಳೆದ ಕೆಲವು ದಿನಗಳಿಂದ ದಕ್ಷಿಣ ಇರಾನ್ ಮೇಲೆ ಅಮೆರಿಕ ನಡೆಸುತ್ತಿರುವ ಸರಣಿ ದಾಳಿಗಳಲ್ಲಿ ಕನಿಷ್ಠ 35 ನಾಗರಿಕರು ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಇದಲ್ಲದೆ, ಅಮೆರಿಕ ನಡೆಸಿದ ಮತ್ತೊಂದು 13 ಕ್ಷಿಪಣಿಗಳ ಭೀಕರ ದಾಳಿಗೆ ಇರಾನ್‌ನ 7 ಸೈನಿಕರು ಬಲಿಯಾಗಿದ್ದಾರೆ.
ಅಮೆರಿಕದ 5ನೇ ಫ್ಲೀಟ್ ಪ್ರಧಾನ ಕಚೇರಿ ಧ್ವಂಸಗೊಳಿಸಿದ ಇರಾನ್!
ಅಮೆರಿಕದ ಈ ‘ಹೇಡಿತನದ ಆಕ್ರಮಣ’ಕ್ಕೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅತ್ಯಂತ ಕ್ರೂರವಾಗಿ ಪ್ರತಿಕಾರ ತೀರಿಸಿಕೊಂಡಿದೆ. ಬಹ್ರೇನ್, ಕುವೈತ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಇರಾನ್ ಪಡೆಗಳು ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ಸುರಿಮಳೆಗೈದಿವೆ.
ಈ ದಾಳಿಯಿಂದಾಗಿ ಬಹ್ರೇನ್‌ನಲ್ಲಿರುವ ಅಮೆರಿಕದ ಅತ್ಯಂತ ಶಕ್ತಿಶಾಲಿ ‘ಫಿಫ್ತ್ ಫ್ಲೀಟ್’ (5th Fleet – 5ನೇ ನೌಕಾಪಡೆ) ಪ್ರಧಾನ ಕಚೇರಿಗೆ ಭಾರಿ ಹಾನಿಯಾಗಿದೆ ಎಂದು ಇರಾನ್ ಸೈನ್ಯ ಪ್ರತಿಪಾದಿಸಿದೆ. ಈ ಭೀಕರ ದಾಳಿಯಿಂದಾಗಿ ಬಹ್ರೇನ್‌ನಲ್ಲಿ ಯುದ್ಧದ ಸೈರನ್‌ಗಳು ಮೊಳಗುತ್ತಿದ್ದರೆ, ಕುವೈತ್ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುತ್ತಿದೆ.
ನಾವು ಯುದ್ಧ ಬಯಸಿಲ್ಲ, ಆದರೆ ಹೋರಾಟಕ್ಕೆ ಸಿದ್ಧ: ಇರಾನ್ ಸ್ಪೀಕರ್
ದೇಶದ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿರುವ ಇರಾನ್‌ನ ಉನ್ನತ ರಾಜತಾಂತ್ರಿಕ ಹಾಗೂ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಾಲಿಬಾಫ್, “ಇರಾನ್ ದೇಶ ಎಂದಿಗೂ ಯುದ್ಧವನ್ನು ಸ್ವಾಗತಿಸಿಲ್ಲ, ಈಗಲೂ ನಮಗೆ ಯುದ್ಧ ಬೇಡ. ಆದರೆ ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಯಾವಾಗಲೂ ಯುದ್ಧಕ್ಕೆ ಸಿದ್ಧರಾಗಿರಬೇಕು ಮತ್ತು ದೃಢವಾಗಿ ನಿಲ್ಲಬೇಕು” ಎಂದಿದ್ದಾರೆ
ಲೆಬನಾನ್‌ನಿಂದ ಇಸ್ರೇಲ್ ಸೇನೆ ವಾಪಸ್?
ಈ ಭೀಕರ ಯುದ್ಧದ ನಡುವೆಯೇ ರೋಮ್‌ನಲ್ಲಿ ನಡೆದ ರಾಜತಾಂತ್ರಿಕ ಮಾತುಕತೆ ಯಶಸ್ವಿಯಾಗಿದ್ದು, ದಕ್ಷಿಣ ಲೆಬನಾನ್‌ನಿಂದ ಇಸ್ರೇಲ್ ಪಡೆಗಳನ್ನು ಸೀಮಿತವಾಗಿ ಹಿಂತೆಗೆದುಕೊಳ್ಳುವ ಕುರಿತು ಇಸ್ರೇಲ್ ಮತ್ತು ಲೆಬನಾನ್ ಒಪ್ಪಂದದ ಚೌಕಟ್ಟಿಗೆ ಸಮ್ಮತಿಸಿವೆ ಎಂದು ಅಮೆರಿಕ ತಿಳಿಸಿದೆ. ಆದಾಗ್ಯೂ, ಇರಾನ್ ಹಾಗೂ ಯುಎಸ್ ನಡುವಿನ ನೇರ ಸಮರ ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿದೆ.
ಇದನ್ನೂ ದಿ : ನಟ ಆಮೀರ್ ಖಾನ್‌ಗೆ ಕೊಂದರೆ ₹5 ಕೋಟಿ ಬಹುಮಾನ ಎಂದ ಪರಮಹಂಸ ಆಚಾರ್ಯ!