ಬೆಂಗಳೂರು : ಭಾರತದ ರೈಲ್ವೆ ವ್ಯವಸ್ಥೆಯನ್ನು ದೇಶದ ನರ ನಾಡಿ ಎನ್ನಲಾಗುತ್ತದೆ. ಅಷ್ಟಮಟ್ಟಿಗೆ ಭಾರತೀಯರು ರೈಲ್ವೆ ಪ್ರಯಾಣದ ಮೇಲೆ ಅವಲಂಬಿತರಾಗಿದ್ದಾರೆ. ಆದ್ರೆ ಆಗಾಗ್ಗೆ ರೈಲಿನಲ್ಲಿ ಕೆಲ ಕಿಡಿಕೇಡಿಗಳ ದುಷ್ಕೃತ್ಯದ ಘಟನೆಗಳು ವರದಿಯಾಗುತ್ತಲೇ ಇರುತ್ತದೆ.ಇದೀಗ ಇದೇ ರೀತಿಯ ಮತ್ತೊಂದು ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
A BJP worker on his way to a different city to create trouble on Holi was caught pissing inside the Train compartment right next to a co passenger under the influence of desi pauwwa. 🤢🤢 pic.twitter.com/OqFsavGLxY
— AASHIQ الفاظ (@OmaagoTuruLob) March 15, 2025
ಈ ಘಟನೆ ಗುವಾಹಟಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನಲ್ಲಿ ನಡೆದಿದ್ದು, ಪ್ರಯಾಣಿಕರ ಮುಂದೆಯೇ ಬೋಗಿಯಲ್ಲೇ ನಿಂತು ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಈ ರೈಲು ವಿಶಾಖಪಟ್ಟಣ (ವೈಜಾಗ್) ಮತ್ತು ಪೆರಂಬೂರು ನಡುವೆ ಚಲಿಸುವ ವೇಳೆ ರೈಲಿನೊಳಗೆ ವ್ಯಕ್ತಿಯೊಬ್ಬ ಈ ರೀತಿ ಮೂತ್ರ ವಿಸರ್ಜಿಸನೆ ಮಾಡಿದ್ದಾನೆ.
ಈ ಘಟನೆಯ ದೃಶ್ಯ ಅದೇ ರೈಲಿನಲ್ಲಿ ಚಲಿಸುತ್ತಿದ್ದ ಪ್ರಯಾಣಿಕರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಈ ರೀತಿ ಸಾರ್ವಜನಿಕ ಸಾರಿಗೆಯಲ್ಲಿ ದುರ್ವರ್ತನೆ ತೋರಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಭಾರತೀಯ ರೈಲ್ವೆ ಇಲಾಖೆಯನ್ನು ಒತ್ತಾಯಿದ್ದಾರೆ.