ನಟಿ ಉರ್ಫಿ ಜಾವೇದ್ ಹೆಸರೇ ಕೇಳುವಾಗ ಅವರ ಉಡುಗೆ ಕುರಿತು ನಾನಾ ರೀತಿಯ ಪ್ರಶ್ನೆಗಳು ಮೂಡುತ್ತದೆ. ಸದಾ ಒಂದಲ್ಲ ಒಂದು ರೀತಿಯಲ್ಲಿ ನೆಟ್ಟಿಗರ ನಡುವೆ ಚರ್ಚೆ ನಡೆಯುತ್ತಿರುತ್ತದೆ.
ಇದೀಗ ಮತ್ತೊಮ್ಮೆ ತಮ್ಮ ವಿಭಿನ್ನ ಶೈಲಿಯ ಉಡುಗೆಯ ಮೂಲಕ ಸುದ್ದಿಯಾಗಿದ್ದಾರೆ. ಈ ಬಾರಿ ಜೀನ್ಸ್ ಪ್ಯಾಂಟನ್ನೇ ಟಾಪ್ ಮಾಡಿಕೊಂಡು ಕ್ಯಾಮೆರಾ ಕಣ್ಣಿಗೆ ಉರ್ಫಿ ಪೋಸ್ ನೀಡಿದ್ದಾರೆ.
ಕುತ್ತಿಗೆ ತನಕ ಜೀನ್ಸ್ ಪ್ಯಾಂಟ್ ಧರಿಸಿಕೊಂಡು ಉರ್ಫಿ ಜಾವೇದ್ ಅವರು ನೆಟ್ಟಿಗರ ಗಮನ ಸೆಳೆದಿದ್ದಾರೆ. ಅವರ ಈ ವೇಷ ಕಂಡು ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ನಟಿಯ ಅವತಾರಕ್ಕೆ ಮಿತಿಯೇ ಇಲ್ಲ ಎಂದು ಹಲವರು ಟೀಕೆ ಮಾಡಿದ್ದಾರೆ.