Monday, February 9, 2026
Homeಟಾಪ್ ನ್ಯೂಸ್PAKISTAN SPIES: ಬೇಹುಗಾರಿಕೆ, ಅಕ್ರಮ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ಅರೆಸ್ಟ್

PAKISTAN SPIES: ಬೇಹುಗಾರಿಕೆ, ಅಕ್ರಮ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ಅರೆಸ್ಟ್

ಲಕ್ನೋ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (STS) ಮೊಹಮ್ಮದ್ ಹರೂನ್ ಮತ್ತು ತುಫೈಲ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುವುದು, ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುವುದು ಮತ್ತು ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರ ಸಹಯೋಗದೊಂದಿಗೆ ಅಕ್ರಮ ಹಣಕಾಸು ವಹಿವಾಟುಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಈ ಇಬ್ಬರನ್ನು ಅರೆಸ್ಟ್‌ ಮಾಡಲಾಗಿದೆ.

ಯುಪಿ ಎಟಿಎಸ್ ನ ಪತ್ರಿಕಾ ಪ್ರಕಟಣೆಯ ಪ್ರಕಾರ, ದೆಹಲಿಯ ಸೀಲಾಂಪುರದ 45 ವರ್ಷದ ಸ್ಕ್ರ್ಯಾಪ್ ವ್ಯಾಪಾರಿ ಮೊಹಮ್ಮದ್ ಹರೂನ್, ನವದೆಹಲಿಯ ಪಾಕಿಸ್ತಾನ ಹೈಕಮಿಷನ್ ಉದ್ಯೋಗಿ ಮುಜಮ್ಮಲ್ ಹುಸೇನ್ ಅವರೊಂದಿಗೆ ಸಂಪರ್ಕದಲ್ಲಿರುವುದು ಕಂಡುಬಂದಿದೆ. ಹಣಕ್ಕೆ ಬದಲಾಗಿ ಪಾಕಿಸ್ತಾನ ಪ್ರಯಾಣಕ್ಕಾಗಿ ವೀಸಾಗಳನ್ನು ಸುಗಮಗೊಳಿಸಲು ಹರೂನ್ ಹುಸೇನ್ ಅವರೊಂದಿಗೆ ಕೆಲಸ ಮಾಡಿದ್ದ ಮತ್ತು ಭಾರತದ ಆಂತರಿಕ ಭದ್ರತೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನದಲ್ಲಿ ಕುಟುಂಬ ಸಂಬಂಧ ಹೊಂದಿರುವ ಹರೂನ್, ಪಾಕಿಸ್ತಾನಿ ಹೈಕಮಿಷನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹುಸೇನ್ ನನ್ನು ಭೇಟಿಯಾಗಿದ್ದ ಎಂದು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಹರೂನ್ ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನಿ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು, ಭಾರತದ ಆಂತರಿಕ ಭದ್ರತೆಯನ್ನು ಅಸ್ಥಿರಗೊಳಿಸುವ ಮಾಹಿತಿಯನ್ನು ರವಾನಿಸಲು ಅವರೊಂದಿಗೆ ಸಹಕರಿಸಿದ್ದರು ಎಂದು ಎಟಿಎಸ್ ಹೇಳಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!