ಮೊದಲು ಲಾಕ್‌ಡೌನ್ ಕಾನೂನನ್ನು ಮುರಿದರು. ನಂತರ ಕಾರ್ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ದಂಡ ವಿಧಿಸಲಾಯಿತು. ಈಗ ಬ್ರಿಟನ್‌ನ ಪ್ರಧಾನಿ ರಿಷಿ ಸುನಕ್ ಮತ್ತೆ ಪೊಲೀಸರೊಂದಿಗೆ ತೊಂದರೆಯಲ್ಲಿದ್ದಾರೆ. ಈ ಬಾರಿ ಅವರು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿರೋದು ನಾಯಿಯಿಂದಾಗಿ.
ರಿಷಿ ಸುನಕ್ ಮತ್ತು ಅವರ ಕುಟುಂಬವು ಸೆಂಟ್ರಲ್ ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ಲ್ಯಾಬ್ರಡಾರ್ ತಳಿಯ ಶ್ವಾನ ನೋವಾನನ್ನು ವಾಕಿಂಗ್‌ಗೆ ಕರೆದೊಯ್ದಿದ್ದಾರೆ. ಆದರೆ ನಾಯಿಯನ್ನು ಮುಕ್ತವಾಗಿ ಪಾರ್ಕ್‌ನಲ್ಲಿ ಓಡಾಡಲು ಬಿಟ್ಟ ಸುನಕ್ ದಂಪತಿ ವಾಕಿಂಗ್ ಹೊರಟಿದ್ದಾರೆ. ನಾಯಿಗಳನ್ನು ಲೀಶ್ ಅಂದರೆ ಬೆಲ್ಟ್ ಹಾಕಿ ಪಾರ್ಕ್‌ಗೆ ಕರೆದೊಯ್ಯಬೇಕು. ಈ ಕುರಿತಾದ ಸ್ಪಷ್ಟ ಚನ್ಹೆಗಳನ್ನೂ ಪಾರ್ಕ್‌ನಲ್ಲಿ ಅಳವಡಿಸಲಾಗಿದೆ. ಆದ್ರೆ ಬ್ರಿಟನ್ ಪ್ರಧಾನಿಯಾಗಿರುವ ಸುನಕ್ ಈ ರೂಲ್ಸ್ ಮುರಿದು ಜನರ ಸಿಟ್ಟಿಗೆ ಕಾರಣವಾಗಿದ್ದಾರೆ.
ಇದನ್ನು ಚಿತ್ರೀಕರಿಸಿದ ನಾಗರೀಕರೊಬ್ಬರು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ರಿಷಿ ಸುನಕ್ ಕುಟುಂಬದ ಈ ನಡವಳಿಕೆಗೆ ನೆಟ್ಟಿಗರ ಆಕ್ರೋಶ ವ್ಯಕ್ತವಾಗಿದೆ.