Monday, January 20, 2025
Homeದೇಶಯುಗಾದಿ 2023: ಮತ್ತೆ ಮುನ್ನೆಲೆಗೆ ಬಂತು ಹಲಾಲ್‌ vs ಜಟ್ಕಾ ಕಟ್.!‌

ಯುಗಾದಿ 2023: ಮತ್ತೆ ಮುನ್ನೆಲೆಗೆ ಬಂತು ಹಲಾಲ್‌ vs ಜಟ್ಕಾ ಕಟ್.!‌

ಜನರು ಯುಗಾದಿ ಹಬ್ಬದ ಸಂಭ್ರಮದಲ್ಲಿ ಆಹ್ಲಾದಿಸುತ್ತಿದ್ದರೆ, ಹಿಂದುತ್ವವಾದಿ ಸಂಘಟನೆಗಳು ಮತ್ತೆ ʼಜಟ್ಕಾ vs ಹಲಾಲ್‌ʼ ವಿವಾದವನ್ನು ಕೆದಕಿ ರಂಗ ಪ್ರವೇಶ ಮಾಡಿದೆ. ಬೆಂಗಳೂರಿನ ಹಲವೆಡೆ ಹಲಾಲ್‌ ವಿರುದ್ಧ ಪ್ರತಿಭಟನೆ ನಡೆಸಿರುವ ವಿವಿಧ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಹಲಾಲ್‌ ವಿರುದ್ಧ ಭಿತ್ತಿ ಪತ್ರ ಹಿಡಿದು, ಜಟ್ಕಾ ಕಟ್‌ ಬಗ್ಗೆ ಪ್ರಚಾರ ಮಾಡಿದ್ದಾರೆ.

ಹೊಸತೊಡ್ಕಿನ ವೇಳೆ, ಮುಸಲ್ಮಾನರ ಹಲಾಲ್ ಕಟ್ ಮಾಂಸದಂಗಡಿಗಳಲ್ಲಿ ಮಾಂಸ ಖರೀದಿಸದಂತೆ ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಹಿಂದೂ ಜನಜಾಗೃತಿ ಸಮಿತಿ, ರಾಷ್ಟ್ರ ರಕ್ಷಣಾ ಪಡೆ, ರಾಷ್ಟ್ರೀಯ ಹಿಂದೂ ಪರಿಷತ್‌ ಸಂಘಟನೆ ಕಾರ್ಯಕರ್ತರು ಆರಂಭಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌, “ಹಿಂದೂಗಳು ಈ ಬಾರಿಯ ಯುಗಾದಿಯಲ್ಲಿ ಬರುವ ಹೊಸ ತೊಡಕು ಹಬ್ಬದಲ್ಲಿ ಹಲಾಲ್‌ ಕಟ್‌ ಮಾಂಸವನ್ನು ಬಳಸಬಾರದು. ಜಟ್ಕಾ ಕಟ್‌ ಮಾಂಸವನ್ನೇ ಬಳಸಬೇಕು” ಎಂದು ಕರೆಕೊಟ್ಟಿದ್ದಾರೆ.

ಹೊಸತೊಡ್ಕಿನ ವೇಳೆ ಟನ್‌ಗಟ್ಟಲೆ ಮಾಂಸದ ವ್ಯಾಪಾರ ನಡೆಯುತ್ತಿದ್ದು, ಇದರ ಲಾಭಗಳೆಲ್ಲಾ ಮುಸ್ಲಿಮರ ಪಾಲಾಗುತ್ತಿದೆ. ಅದೇ ಹಣ ಹಿಂದೂಗಳ ಮೇಲಿನ ದಬ್ಬಾಳಿಕೆಗೆ ಕಾರಣವಾಗುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ.

ಹೆಚ್ಚಿನ ಸುದ್ದಿ

error: Content is protected !!