Monday, November 4, 2024
Homeಬೆಂಗಳೂರುನಕಲಿ ಸಾಲಿಗ್ರಾಮ ಶಿಲೆ ಮಾರಾಟ ಯತ್ನ : ಇಬ್ಬರ ಬಂಧನ

ನಕಲಿ ಸಾಲಿಗ್ರಾಮ ಶಿಲೆ ಮಾರಾಟ ಯತ್ನ : ಇಬ್ಬರ ಬಂಧನ

ಗುಂಡಗಿನ ಕಲ್ಲೊಂದನ್ನು ತೋರಿಸಿ ಇದು ಅದೃಷ್ಟ ತರುವ ಸಾಲಿಗ್ರಾಮ ಶಿಲೆ ಎಂದು ಬಿಂಬಿಸಿ ಕೋಟಿ ಕೋಟಿ ರೂ. ಟೋಪಿ ಹಾಕಲು ಹೊರಟಿದ್ದ ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿ ಒಳಗಟ್ಟಿದ್ದಾರೆ.

ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಖಾಸಗಿ ಹೋಟೆಲೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮಹಾರಾಷ್ಟ್ರ ಮೂಲದ ಮನೋಜ್ ಹಾಗೂ ಆದಿತ್ಯ ಸಾಗರ್ ಎಂಬ ಇಬ್ಬರು ಖದೀಮರನ್ನು ಸೆರೆಹಿಡಿದಿದ್ದಾರೆ.

ಮಾರಾಟ ಮಾಡಲು ತಂದಿದ್ದ ನಕಲಿ ಸಾಲಿಗ್ರಾ

ಗುಜರಾತಿನ ಗೋಮತಿ ನದಿಯಿಂದ ಈ ಕಲ್ಲನ್ನು ತರಲಾಗಿದೆ ಎಂದು ಗಿರಾಕಿಗಳನ್ನು ನಂಬಿಸುತ್ತಿದ್ದ ಮನೋಜ್ ಮತ್ತು ಆದಿತ್ಯ ಸಾಗರ್, ಇದು ದೈವದ ಕಲ್ಲಾಗಿದ್ದು ಇದನ್ನು ಹೊಂದಿದವರಿಗೆ ಭಾರೀ ಅದೃಷ್ಟ ತರುತ್ತದೆ ಎಂದು ಮೋಸ ಮಾಡುತ್ತಿದ್ದರು. ಗಿರಾಕಿಯೊಬ್ಬರೊಡನೆ ಆ ಕಲ್ಲಿನ ಶಕ್ತಿಯ ಬಗ್ಗೆ ಜನರಿಗೆ ನಂಬಿಕೆ ಮೂಡುವಂತೆ ಮಾಡಲು ಅದಕ್ಕೆ ಬಟ್ಟೆಯೊಂದನ್ನು ಸುತ್ತಿ, ಪೆಟ್ರೋಲ್ ಹಾಗೂ ಕರ್ಪೂರದಿಂದ ಬೆಂಕಿ ಅಂಟಿಸಿದರೂ ಸಹ ಆ ಬಟ್ಟೆ ಸುಡುವುದಿಲ್ಲ ಎಂದು ಬಿಂಬಿಸುತ್ತಿದರು. ಆದ್ರೆ ಬಟ್ಟೆ ಸುಡದ ಹಾಗೆ ಕೆಮಿಕಲ್ ಹಾಕಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಎಸಿಪಿ ಶಿವಕುಮಾರ್ ನೇತೃತ್ವದಲ್ಲಿ ಸಿಸಿಬಿ ತಂಡ ದಾಳಿ ನಡೆಸಿತ್ತು. ವ್ಯಾಪಾರಿಗಳ ಸೋಗಿನಲ್ಲಿ ಆರೋಪಿಗಳೊಡನೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾದ ಸಿಸಿಬಿ ತಂಡ ಅವರನ್ನು ಖೆಡ್ಡಾಗೆ ಕೆಡವಿದೆ. ವಂಚಕರಿಂದ ಎರಡು ಕಲ್ಲುಗಳು, ಕೃತ್ಯಕ್ಕೆ ಬಳಸಿದ ರಾಸಾಯನಿಕ ವಸ್ತುಗಳನ್ನು ವಶ ಪಡಿಸಿಕೊಂಡಿರುವುದಾಗಿ ಸಿಸಿಬಿ ಜಂಟಿ ಆಯುಕ್ತ ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!