ವಾಷಿಂಗ್ಟನ್: ಟ್ವಿಟ್ಟರ್ ದೊಡ್ಡ ಪ್ರಮಾಣದಲ್ಲಿ ಬಳಕೆದಾರರ ಖಾತೆಗಳನ್ನು ಅನ್‌ಫಾಲೋ ಮಾಡಲು ಪ್ರಾರಂಭಿಸಿದೆ. ಬ್ಲೂ ಮಾರ್ಕ್ ಗಾಗಿ ಪಾವತಿಸದ ಎಲ್ಲ ಬಳಕೆದಾರರನ್ನು ಟ್ವಿಟ್ಟರ್ ಸಾಮೂಹಿಕವಾಗಿ ಅನ್‌ಫಾಲೋ ಮಾಡುತ್ತಿದೆ.
ಟ್ವಿಟ್ಟರ್ ಕೆಲ ಸಮಯದಿಂದ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ಟ್ವಿಟ್ಟರ್ ಲೋಗೋದಿಂದ ನೀಲಿ ಹಕ್ಕಿಯನ್ನು ತೆಗೆದು ನಾಯಿ ಚಿತ್ರವನ್ನು ಹಾಕಿದ್ದರು. ಇದೀಗ 2,25,000 ಖಾತೆಗಳನ್ನು ಅನ್‌ಫಾಲೋ ಮಾಡಲಾಗಿದೆ. ಕೆಲವು ಸಮಯದ ಹಿಂದೆ ಟ್ವಿಟ್ಟರ್ 4,20,000 ಪರಿಶೀಲಿಸಿದ ಖಾತೆಗಳನ್ನು ಅನುಸರಿಸುತ್ತಿತ್ತು. ಎಲೋನ್ ಮಸ್ಕ್ ಟ್ವಿಟರ್ ಬ್ಲೂ ಪಾಲಿಸಿಯನ್ನು ತಂದ ನಂತರ, ಕಂಪನಿಯು ಏಪ್ರಿಲ್ 1 ರಿಂದ ಎಲ್ಲಾ ಪರಿಶೀಲಿಸಿದ ಖಾತೆಗಳನ್ನು ಮುಚ್ಚಲು ಮತ್ತು ಆ ಜನರ ಬ್ಲೂ ಟಿಕ್‌ಗಳನ್ನು ತೆಗೆದುಹಾಕುವ ಎಚ್ಚರಿಕೆ ನೀಡಿತ್ತು.
ನೀಲಿ ಸದಸ್ಯತ್ವವನ್ನು ಹೊಂದಿಲ್ಲದಿದ್ದರೆ ಖಾತೆಗಳನ್ನು ತೆಗೆದುಹಾಕಲಾಗುವುದು ಎಂದು ಟ್ವಿಟ್ಟರ್ ತಿಳಿಸಿತ್ತು. ಈ ಬ್ಲೂ ಟಿಕ್ ವಿಶೇಷ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ಸಾರ್ವಜನಿಕರು, ಸೆಲೆಬ್ರಿಟಿಗಳಿಂದ ಹಿಡಿದು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಇತರೆ ವಲಯಗಳಲ್ಲಿ ಹೆಸರು ಮಾಡಿದವರನ್ನು ಟ್ವಿಟ್ಟರ್ ಪರಿಶೀಲನೆ ಮಾಡುತ್ತದೆ. ಟ್ವಿಟ್ಟರ್‌ನಲ್ಲಿ ಈ ನೀಲಿ ಟಿಕ್ ಎಂದರೆ ನಿಮ್ಮ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸಲಾಗಿದೆ ಮತ್ತು ನಕಲಿ ಅಲ್ಲ ಎಂದರ್ಥ, ಅಂತಹವರ ನಿಜವಾದ ಖಾತೆಯ ಬಗ್ಗೆ ಜನರಿಗೆ ತಿಳಿಯುವಂತೆ ಮತ್ತು ಯಾವುದೇ ನಕಲಿ ಖಾತೆಯೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಲು ಈ ಬ್ಲೂ ಟಿಕ್ ನೀಡಲಾಗಿದೆ.
ಟ್ವಿಟರ್‌ನಲ್ಲಿ ಲಕ್ಷಾಂತರ ಜನರು ಖಾತೆಗಳನ್ನು ಹೊಂದಿದ್ದಾರೆ. ಆದರೆ ಈ ಖಾತೆಗಳಲ್ಲಿ ಕೇವಲ 89 ಸಾವಿರ ಖಾತೆಗಳನ್ನು ಮಾತ್ರ ಪರಿಶೀಲಿಸಲಾಗಿದೆ. ಆದರೆ, ಶೀಘ್ರದಲ್ಲೇ ಈ ಬ್ಲೂ ಟಿಕ್ ಅನ್ನು ಸಾಮಾನ್ಯ ಜನರ ಖಾತೆಗೂ ಹಾಕಬಹುದು. ಇದಕ್ಕಾಗಿ ಟ್ವಿಟ್ಟರ್ ಕೆಲವು ಹೊಸ ನಿಯಮಗಳನ್ನು ಹೊರಡಿಸಿದೆ. ಇನ್ನು ಎರದು ದಿನಗಳ ಹಿಂದೆಯಷ್ಟೇ ಮರೆಯಾಗಿದ್ದ ನೀಲಿ ಹಕ್ಕಿ ಲೊಗೊ ಮತ್ತೆ ಮರಳಿದೆ.