Monday, June 15, 2026
Homeಟಾಪ್ ನ್ಯೂಸ್ROAD MISHAP : ಕುಣಿಗಲ್​​​​​​ನಲ್ಲಿ ಘೋರ ದುರಂತ, ಭೀಕರ ಅಪಘಾತಕ್ಕೆ ತಾಯಿ-ಮಗಳು ಸ್ಥಳದಲ್ಲೇ ಸಾ*ವು!

ROAD MISHAP : ಕುಣಿಗಲ್​​​​​​ನಲ್ಲಿ ಘೋರ ದುರಂತ, ಭೀಕರ ಅಪಘಾತಕ್ಕೆ ತಾಯಿ-ಮಗಳು ಸ್ಥಳದಲ್ಲೇ ಸಾ*ವು!

ತುಮಕೂರು: ಇಲ್ಲಿನ (Tumkur) ರಾಷ್ಟ್ರೀಯ ಹೆದ್ದಾರಿ 75ರ (Nationl highway 75) ಉರ್ಕೇಹಳ್ಳಿ ಜಂಕ್ಷನ್ ಬಳಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಾಜಕಕ್ಕೆ ಜೋರಾಗಿ ಅಪ್ಪಳಿಸಿ ಭೀಕರ ಅಪಘಾತ (Roadmishap) ಸಂಭವಿಸಿದೆ. ಈ ರಭಸಕ್ಕೆ ಇಡೀ ಕಾರು ಜಖಂಗೊಂಡಿದ್ದು, ಒಳಗಿದ್ದ ಜಯಮಾಲಾ (60) ಹಾಗೂ ಅವರ ಪುತ್ರಿ ರಾಜೇಶ್ವರಿ (40) ಮೃತಪಟ್ಟಿದ್ದಾರೆ.

ಇದನ್ನೂ ಓದಿ : ಟೆಂಪೋ-ಕಂಟೇನರ್ ಮಧ್ಯೆ ಭೀಕರ ಅಪಘಾತ, 13 ಮಂದಿ ಬ*ಲಿ! : VIDEO

ಈ ಅಪಘಾತದಲ್ಲಿ ಮೃತಪಟ್ಟ ಜಯಮಾಲಾ ಹಾಗೂ ಪುತ್ರಿ ರಾಜೇಶ್ವರಿ ಮೂಲತಃ ರಾಯಚೂರಿನವರಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದರು. ಮಗ ಪ್ರೀತಂನನ್ನು ಶ್ರವಣಬೆಳಗೊಳದ ವಸತಿ ಶಾಲೆಗೆ ದಾಖಲಿಸಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಇನ್ನು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಾಲಕ ಪ್ರೀತಂನನ್ನು ಸ್ಥಳೀಯರು ತಕ್ಷಣವೇ ಕುಣಿಗಲ್‌ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಮಹಿಳೆಯರ ಮೃತದೇಹಗಳನ್ನು ಸಹ ಅದೇ ಆಸ್ಪತ್ರೆಯ ಶವಪರೀಕ್ಷಾ ಕೇಂದ್ರಕ್ಕೆ ಸಾಗಿಸಲಾಗಿದೆ. ಸದ್ಯ ಕುಣಿಗಲ್ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!