ಬಿಜೆಪಿಯಲ್ಲಿ ಇನ್ನೂ ಟಿಕೆಟ್ ಘೋಷಣೆಯಾಗದಿದ್ರೂ ಭಿನ್ನಮತ, ಬಂಡಾಯ ಜೋರಾಗಿಯೇ ಇದೆ. ಅಸಮಾಧಾನಗೊಂಡಿರುವ ನಾಯಕರನ್ನು ಬೇರೆ ಪೋಸ್ಟ್ ನೀಡಿ ತಣ್ಣಗಾಗಿಸುವ ಬಿಜೆಪಿ ಪ್ಲ್ಯಾನ್ ಸದ್ಯ ಅದಕ್ಕೇ ತಿರುಗು ಬಾಣವಾಗುವ ಸಾಧ್ಯತೆ ದಟ್ಟವಾಗಿದೆ.
ಗುಬ್ಬಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ವಸತಿ ಸಚಿವ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ರನ್ನು ನಳಿನ್ ಕುಮಾರ್ ಕಟೀಲ್ ತುಮಕೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಇದು ಸ್ಥಳೀಯ ಬಿಜೆಪಿಗರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಅದರಲ್ಲೂ ಬಿಎಸ್‌ವೈ ಹಾಗೂ ಅವರ ಪುತ್ರರೊಂದಿಗೆ ಸೋಮಣ್ಣ ಹಾಗೂ ಅವರ ಪುತ್ರ ಮನಸ್ತಾಪ ಹೊಂದಿರುವ ಹಿನ್ನೆಲೆಯಲ್ಲಿ ಬಿಎಸ್‌ವೈ ಅಭಿಮಾನಿಗಳೂ ಕೂಡಾ ಗರಂ ಆಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರೋಧಿಗಳಿಗೆ ಬೆಂಬಲವಿಲ್ಲ ಎಂದು Go Back Arun Somanna ಅಭಿಯಾನವನ್ನು ಆರಂಭಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಇಲ್ಲದಕ್ಕೆ ಹೊರಗಿನವರನ್ನು ಕರೆ ತಂದು ನಾಯಕರನ್ನಾಗಿ ಮಾಡುತ್ತಿದ್ದೀರ ಎಂದು ಬಿಜೆಪಿ ನಾಯಕತ್ವವನ್ನು ಸ್ಥಳೀಯ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.