ಹೈದರಾಬಾದ್: ತಿರುಪತಿಯ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ಹಲವು ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ಭಕ್ತರು ತಿರುಮಲಕ್ಕೆ ಆಗಮಿಸುವ ಮುನ್ನ ವಿವರಗಳನ್ನು ತಿಳಿದು ಆಗಮಿಸುವಂತೆ ಟಿಟಿಡಿ ಮನವಿ ಮಾಡಿದೆ.
ತಿರುಮಲ ಸ್ವಾಮಿಗೆ ಸಾಲಕಟ್ಲ ಬ್ರಹ್ಮೋತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಹೀಗಾಗಿ ಹಲವು ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಟಿಟಿಡಿ ಪ್ರಕಟಿಸಿದೆ.
ವಸಂತೋತ್ಸವದ ನಿಮಿತ್ತ ಏಪ್ರಿಲ್ 3 ರಿಂದ 5ರವರೆಗೆ ಕಲ್ಯಾಣೋತ್ಸವ, ಊಂಜಲಸೇವೆ, ಆರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ.
ಶ್ರೀ ಮಲಯಪ್ಪಸ್ವಾಮಿಗೆ ವಸಂತ ಋತುವಿನಲ್ಲಿ ನಡೆಯುವ ಈ ಉತ್ಸವಕ್ಕೆ ‘ವಸಂತೋತ್ಸವ’ ಎನ್ನುತ್ತಾರೆ. ಈ ವಸಂತೋತ್ಸವದ ಮುಖ್ಯ ಪ್ರಕ್ರಿಯೆಯು ಭಗವಂತನಿಗೆ ಪರಿಮಳಯುಕ್ತ ಹೂವುಗಳನ್ನು ಅರ್ಪಿಸುವುದರ ಜೊತೆಗೆ ವಿವಿಧ ಹಣ್ಣುಗಳನ್ನು ನೈವೇದ್ಯ ಮಾಡಲಾಗುತ್ತದೆ.
ಪ್ರತಿ ವರ್ಷ ಚೈತ್ರಶುದ್ಧ ಹುಣ್ಣಿಮೆಯಂದು ತಿರುಮಲದಲ್ಲಿ ಮೂರು ದಿನಗಳ ಕಾಲ ಈ ಉತ್ಸವಗಳು ನಡೆಯುತ್ತದೆ. ಏಪ್ರಿಲ್ 3ರ ಬೆಳಗ್ಗೆ 7 ಗಂಟೆಗೆ ಶ್ರೀದೇವಿ ಭೂದೇವಿ ಸಮೇತ ಶ್ರೀ ಮಲಯಪ್ಪ ಸ್ವಾಮಿಯ ಮೆರವಣಿಗೆ ನಡೆಸಿ ನಂತರ ವಸಂತೋತ್ಸವ ಮಂಟಪಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ವಸಂತೋತ್ಸವ ಅಭಿಷೇಕ ನಿವೇದನೆಗಳನ್ನು ಮುಗಿಸಿ ದೇವಸ್ಥಾನಕ್ಕೆ ಮೆರವಣಿಗೆ ಮರಳಲಿದೆ.
ಏ. 4ರಂದು ಶ್ರೀ ಭೂ ಸಮೇತ ಶ್ರೀ ಮಲಯಪ್ಪಸ್ವಾಮಿ ಚಿನ್ನದ ರಥವನ್ನು ಏರಿಸಿ ಬೆಳಗ್ಗೆ 8 ರಿಂದ 10ರವರೆಗೆ ತಿರುಮಲದ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಬಳಿಕ ವಸಂತ ಮಂಟಪದಲ್ಲಿ ವಸಂತೋತ್ಸವ ನಡೆಯಲಿದೆ.
ಏಪ್ರಿಲ್ 5ರಂದು ಶ್ರೀದೇವಿ ಮತ್ತು ಭೂದೇವಿ ಸಮೇತ ಶ್ರೀ ಮಲಯಪ್ಪಸ್ವಾಮಿ, ಶ್ರೀ ಸೀತಾರಾಮಲಕ್ಷ್ಮಣ ಆಂಜನೇಯ ಸ್ವಾಮಿ ಉತ್ಸವ ಮತ್ತು ಶ್ರೀಕೃಷ್ಣಸ್ವಾಮಿ ಉತ್ಸವಮೂರ್ತಿ ಶ್ರೀ ರುಕ್ಮಿಣಿ ಸಹಿತ ವಸಂತೋತ್ಸವ ನಡೆಯಲಿದೆ.