Monday, January 20, 2025
Homeಟಾಪ್ ನ್ಯೂಸ್ಸತ್ಯವೇ ನನ್ನ ಆಯುಧ, ಸತ್ಯವೇ ನನ್ನ ಭರವಸೆ: ರಾಹುಲ್ ಗಾಂಧಿ

ಸತ್ಯವೇ ನನ್ನ ಆಯುಧ, ಸತ್ಯವೇ ನನ್ನ ಭರವಸೆ: ರಾಹುಲ್ ಗಾಂಧಿ

ನವದೆಹಲಿ: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಸೆಶನ್ ಕೋರ್ಟ್ ಜಾಮೀನು ನೀಡಿದ ಬಳಿಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸತ್ಯವೇ ನನ್ನ ಆಯುಧ ಎಂದಿದ್ದಾರೆ.

’ಇದು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟ. ಈ ಹೋರಾಟದಲ್ಲಿ ಸತ್ಯವೇ ನನ್ನ ಆಯುಧ, ಸತ್ಯವೇ ನನ್ನ ನೆಲೆ‘ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ದೋಷಿ ಎಂದು ತೀರ್ಪಿತ್ತಿದ್ದ ಕೋರ್ಟ್ 2 ವರ್ಷಗಳ ಕಾಲ ಶಿಕ್ಷೆ ವಿಧಿಸಿತ್ತು. ಇಂದು ರಾಹುಲ್ ನ್ಯಾಯಾಲಯಕ್ಕೆ ಹಾಜರಾಗಿ ಮೇಲ್ಮನವಿ ಸಲ್ಲಿಸಿದ್ದರು. ಕೋರ್ಟ್ ಸದ್ಯ ಕಾಂಗ್ರೆಸ್ ನಾಯಕನಿಗೆ ಜಾಮೀನು ನೀಡಿದೆ.

ಹೆಚ್ಚಿನ ಸುದ್ದಿ

error: Content is protected !!