ನ್ಯೂಯಾರ್ಕ್: ಮಾನಹಾನಿ ಪ್ರಕರಣದಲ್ಲಿ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ವಿರುದ್ಧ ಡೊನಾಲ್ಡ್ ಟ್ರಂಪ್ ಕಾನೂನಾತ್ಮಕ ಜಯ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ 1,21,000 ಡಾಲರ್ ಹಣವನ್ನು ಸ್ಟಾರ್ಮಿ ಡೇನಿಯಲ್ಸ್ ಟ್ರಂಪ್ ಅವರಿಗೆ ಪಾವತಿಸಬೇಕಾಗಿದೆ.
ಈಗಾಗಲೇ ಸ್ಟಾರ್ಮಿ ಡೇನಿಯಲ್ಸ್ ನ್ಯಾಯಾಲಯದ ಆದೇಶದಂತೆ ಟ್ರಂಪ್ ಅವರ ವಕೀಲರಿಗೆ 5,00,000 ಡಾಲರ್ ಪಾವತಿಸುತ್ತಿದ್ದಾರೆ.
ಸ್ಟಾರ್ಮಿ ಡೇನಿಯಲ್ಸ್ ಬಾಯಿ ಮುಚ್ಚಿಸಲು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಕೋಟ್ಯಾಂತರ ರೂಪಾಯಿ ಹಣ ನೀಡಿದ್ದ ಪ್ರಕರಣ ಸೇರಿ ಇತರ 30ಕ್ಕೂ ಹೆಚ್ಚು ಪ್ರಕರಣಗಳಿಗೆ ಸಂಬಂಧಿಸಿ ಟ್ರಂಪ್ ಬಂಧನಕ್ಕೊಳಗಾದ ದಿನವೇ ಈ ತೀರ್ಪು ಬಂದಿದೆ.
2018ರಲ್ಲಿ ಸ್ಟಾರ್ಮಿ ಡೇನಿಯಲ್ಸ್ ಟ್ವೀಟ್ ಒಂದನ್ನು ಮಾಡಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಬಳಿ ಬಂದು ಟ್ರಂಪ್ ಜೊತೆಗಿನ ಸಂಬಂಧದ ಬಗ್ಗೆ ಬಾಯ್ತೆರೆಯಬಾರದು ಎಂದು ಬೆದರಿಸಿದ್ದ ಎಂದಿದ್ದರು. ಈ ಬಗ್ಗೆ ಟ್ರಂಪ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.