ವಾಷಿಂಗ್ಟನ್ : ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ರ ಬೆಂಬಲಿಗರನ್ನು ಕಸ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ ಬಹಳ ವಿವಾದ ಸೃಷ್ಟಿಯಾಗಿದ್ದು, ಇದರ ಬೆನ್ನಲ್ಲೇ ಟ್ರಂಪ್ ಕಸದ ಟ್ರಕ್ ಏರುವ ಮೂಲಕ ತಿರುಗೇಟು ನೀಡಿದ್ದಾರೆ.
ಜೋ ಬೈಡನ್ ಲ್ಯಾಟಿನೊ ಮತದಾರರನ್ನುದ್ದೇಶಿಸಿ ಪ್ರಚಾರ ನಡೆಸುವ ಬರದಲ್ಲಿ ಡೊನಾಲ್ಡ್ ಟ್ರಂಪ್ ರ ಚುನಾವಣಾ ಸಮಾವೇಶದಲ್ಲಿ ಜನಾಂಗೀಯ ನಿಂದನೆಯ ಹಾಸ್ಯ ಮಾಡಿದ್ದ ಕಾಮೆಡಿಯನ್ ಪ್ಯೂರ್ಟೊ ರಿಕೊರನ್ನು ಕಸದ ದ್ವೀಪ ಎಂದು ಟೀಕಿಸಿದ್ದರು
ನಾನು ಇಲ್ಲಿ ನೋಡುತ್ತಿರುವ ತೇಲುತ್ತಿರುವ ಕಸವೆಂದರೆ, ಅದು ಟ್ರಂಪ್ ಬೆಂಬಲಿಗರು. ಲ್ಯಾಟಿನೋ ಮತದಾರರನ್ನು ಅವರು ಬಣ್ಣಿಸಿರುವ ರೀತಿ ಪ್ರಜ್ಞಾಹೀನವಾಗಿದ್ದು, ಇದು ನಾವೇನು ಇಲ್ಲಿಯವರೆಗೆ ಮಾಡಿದ್ದೇವೋ ಅದಕ್ಕೆ ಸಂಪೂರ್ಣ ವಿರುದ್ಧವಾದು. ನಾವೇನಾಗಿದ್ದೇವೋ ಅದಕ್ಕೆ ತದ್ವಿರುದ್ಧವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.
BREAKING: Donald Trump gets picked up in Green Bay, Wisconsin by a garbage truck, just one day after Joe Biden called Trump supporters “garbage.” pic.twitter.com/jqjiX6a43V
— Collin Rugg (@CollinRugg) October 30, 2024
ಇದಕ್ಕೆ ಪ್ರತಿಯಾಗಿ ಟ್ರಂಪ್, ಬಿಳಿ ಬಣ್ಣದ ಬಟ್ಟೆ ಹಾಗೂ, ಕೇಸರಿ ಬಣ್ಣದ ಸುರಕ್ಷಿತ ಉಡುಪನ್ನು ಧರಿಸಿ ಟ್ರಂಪ್ ಅಮೆರಿಕವನ್ನು ಮತ್ತೆ ಶ್ರೇಷ್ಠಗೊಳಿಸಿ ಎಂಬ ಹೆಸರಿನಲ್ಲಿ ಟ್ರಕ್ ಚಾಲನೆ ಮಾಡಿ ನನ್ನ ಕಸದ ಟ್ರಕ್ ಅನ್ನು ನೀವು ಹೇಗೆ ಇಷ್ಟಪಡುತ್ತೀರಿ? ಎಂದು ಬರೆದುಕೊಂಡಿದ್ದಾರೆ.