ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಬಂಜಾರ, ಭೋವಿ, ಕೋರಚಾ, ಕೋರಮ ಸಮುದಾಯಗಳು ಸಿಡಿದೆದ್ದಿದೆ. ರಾಜ್ಯದ ಹಲವೆಡೆ ತೀವ್ರ ತರವಾದ ಪ್ರತಿಭಟನೆಗಳು ನಡೆಯುತ್ತಿದೆ.
ಒಳ ಮೀಸಲಾತಿ ವಿರೋಧಿಸಿ ಬಿಜೆಪಿಯಲ್ಲಿರುವ ಲಂಬಾಣಿ, ಬಂಜಾರ ಸಮಾಜದ ಸಚಿವರು ಹಾಗೂ ಶಾಸಕರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದು, ಇಲ್ಲದಿದ್ದರೆ ಸಮಾಜ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದೆ ಎಂದು ಎಚ್ಚರಿಸಲಾಗಿದೆ.
ಈ ನಡುವೆ, ಬಂಜಾರ ಸಮುದಾಯದ ಜನಪ್ರತಿನಿಧಿಗಳಿಗೆ ಶೃದ್ಧಾಂಜಲಿ ಅರ್ಪಿಸಿ ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದ್ದಾರೆ.
ಶಾಸಕ ಪ್ರಭು ಚವ್ಹಾಣ, ರಾಜೀವ್ ಕುಡಚಿ, ಉಮೇಶ್ ಜಾಧವ್ ರ ಭಾವಚಿತ್ರ ಹಾಕಿ “ಮತ್ತೆ ಹುಟ್ಟಿ ಬರಬೇಡಿ ಬಂಜಾರ ಸಮುದಾಯದಲ್ಲಿ.. ಶೃದ್ದಾಂಜಲಿಗಳು.. ನ್ಯಾಯ ಕೊಡಿಸದ ನಾಲಾಯಕ್ ನಾಯಕರು” ಎಂದು ಬರೆದಿದ್ದಾರೆ.