Thursday, April 16, 2026
Homeಟಾಪ್ ನ್ಯೂಸ್TRAGEDY: ಅಗ್ನಿಕೊಂಡ ಮಹೋತ್ಸವದಲ್ಲಿ ಅವಘಡ, ಕೊಂಡದಲ್ಲಿ ಬಿದ್ದ ದೇವಾಲಯದ ಅರ್ಚಕ!-VIDEO

TRAGEDY: ಅಗ್ನಿಕೊಂಡ ಮಹೋತ್ಸವದಲ್ಲಿ ಅವಘಡ, ಕೊಂಡದಲ್ಲಿ ಬಿದ್ದ ದೇವಾಲಯದ ಅರ್ಚಕ!-VIDEO

ಮಾಗಡಿ: ಕೊಂಡ ಹಾಯುವಾಗ ಅರ್ಚಕರೊಬ್ಬರು ನಿಯಂತ್ರಣ ಕಳೆದುಕೊಂಡು ಅಗ್ನಿಕೊಂಡದಲ್ಲಿ ಬಿದ್ದ ಘಟನೆ (tragedy) ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದಲ್ಲಿ ಬುಧವಾರ ನಡೆದ ಪ್ರಸಿದ್ಧ ದಕ್ಷಿಣಮುಖಿ ಬಸವೇಶ್ವರ ಸ್ವಾಮಿ ಅಗ್ನಿಕೊಂಡ ಮಹೋತ್ಸವದ ವೇಳೆ ನಡೆದಿದೆ.

ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಶಾಸ್ತ್ರಿ ನಿಯಂತ್ರಣ ಕಳೆದುಕೊಂಡವರು. ಘಟನೆ ಸಂಭವಿಸುತ್ತಿದ್ದಂತೆಯೇ ಕೊಂಡದ ಸುತ್ತಮುತ್ತ ಇದ್ದ ಭಕ್ತರು ಹಾಗೂ ಸ್ಥಳೀಯರು ತಕ್ಷಣವೇ ಬಸವರಾಜ ಶಾಸ್ತ್ರಿ ಅವರನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ತಕ್ಷಣವೇ ಅವರನ್ನು ಸಮೀಪದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ವೈದ್ಯಕೀಯ ಚಿಕಿತ್ಸೆ ಬಳಿಕ ಅವರು ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಭಾರತ ರಾಜತಾಂತ್ರಿಕತೆಗೆ ಗೆಲುವು! ಸೌದಿಯಿಂದ ಮುಂಬೈಗೆ ಬಂತು 1.35 ಲಕ್ಷ ಮೆಟ್ರಿಕ್ ಟನ್​ ಪೆಟ್ರೋಲಿಯಂ-VIDEO

ಕಾಂಪೌಂಡ್ ಹಾರಿ ಗ್ಯಾಸ್ ಸಿಲಿಂಡರ್ ಹೊತ್ತೊಯ್ದ ಕಳ್ಳ

ರಾಜ್ಯದಲ್ಲಿ (Karnataka ) ಸಿಲಿಂಡರ್ (Cylinder )ಅಭಾವ ಸೃಷ್ಟಿಯಾಗಿದ್ದು, ಹೋಟೆಲ್ ಗಳು ಹಾಗೂ ಫಾಸ್ಟ್ ಫುಡ್ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.ಈ ನಡುವೆ ಸಿಲಿಂಡರ್ ಕಳ್ಳರ ಹಾವಳಿ ಕೂಡ ಹೆಚ್ಚಾಗಿದೆ.

ಸಿಲಿಂಡರ್ ಸಮಸ್ಯೆ ಬೆನ್ನಲ್ಲೇ ತುಂಬಿದ ಸಿಲಿಂಡರ್ ಕಳ್ಳತನ ನಡೆದಿದೆ.ಬೆಂಗಳೂರಿನ ನಾಗರಬಾವಿಯ ಕಲ್ಯಾಣ ನಗರದಲ್ಲಿ ಈ ಒಂದು ಕಳ್ಳತನ ನಡೆದಿದೆ.

ಕಲ್ಯಾಣ ನಗರದಲ್ಲಿ ಬೈಕಿನಲ್ಲಿ ಬಂದು ಮನೆಯ ಕಾಂಪೌಂಡ್ ನಲ್ಲಿದ್ದಂತ ಚೀಲದ ಸಮೇತ ಸಿಲಿಂಡರ್ ಕಳ್ಳತನ ನಡೆದಿದೆ. ಮನೆಯವರು ಸಿಲಿಂಡರ್ ಫುಲ್ ಮಾಡಿ ಚೀಲದಲ್ಲಿ ಇಟ್ಟಿದ್ದರು. ಇದನ್ನು ಮೊದಲೇ ಗಮನಿಸಿದ್ದ ಕಳ್ಳ ರಾತ್ರಿ ಬೈಕ್ ನಲ್ಲಿ ಬಂದು ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿದ್ದಾನೆ.

ಸಿಲಿಂಡರ್ ಗೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಕಳ್ಳತನ ಕೇಸ್ ಹೆಚ್ಚಾಗ್ತಿದೆ. ಪೊಲೀಸರು ಇತ್ತ ಗಮನ ಹರಿಸಿ ಕ್ರಮಕೈಗೊಳ್ಳಬೇಕಿದೆ. ಸದ್ಯ ಸಿಸಿ ಟಿವಿ ಹಾಗೂ ಗಾಡಿ ನಂಬರ್ ಆಧರಿಸಿ ಕಳ್ಳರ ಪೊಲೀಸರು ಬಲೆ ಬೀಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!