ಶಿವಮೊಗ್ಗ: ರಾಜ್ಯದ ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳ ಪೈಕಿ ಒಂದಾದ ಜೋಗ ಜಲಪಾತ ಇನ್ನು ಕೆಲವು ದಿನಗಳ ಮಟ್ಟಿಗೆ ಪ್ರವಾಸಿಗರ ಪಾಲಿಗೆ ಬಂದ್ ಆಗಲಿದೆ.ಈ ಪ್ರದೇಶದಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿ ಆರಂಭವಾಗುತ್ತಿದೆ.ಹೀಗಾಗಿ ಜಲಪಾತದ ಮುಖ್ಯದ್ವಾರದ ಕಾಮಗಾರಿಯೂ ನಡೆಯಲಿದೆ.
ಹೀಗಾಗಿ ಏ.30 ರವರೆಗೆ ಜೋಗ ಜಲಪಾತಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.ಈ ಕಾಮಗಾರಿ ನಿಗಧಿತ ಕಾಲ ಮಿತಿಯೊಳಗೆ ಮುಗಿಯಬೇಕಿದ್ದು ಜೋಗ ಜಲಪಾತದ ಪ್ರವೇಶ ದ್ವಾರವನ್ನು ಜ.1 ರಿಂದ ಮಾ.15 ರವರೆ ಮುಚ್ಚಲಾಗಿರುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ 08182-251444 ಸಂಪರ್ಕಿಸಬಹುದು.
ಈ ಮುಂಚೆ ಮಾ.15 ರ ಡೆಡ್ ಲೈನ್ ನೀಡಲಾಗಿತ್ತಾದರೂ ಜೋಗ ಜಲಪಾತದ ದ್ವಾರದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಏ.30 ರವರೆಗೆ ಮತ್ತೆ ಮುಂದೂಡಲಾಗಿದೆ. ಹೀಗಾಗಿ ಸಾರ್ವಜನಿಕರು ಮತ್ತು ಪ್ರವಾಸಿಗರು ಸಹಕರಿಸಬೇಕು ಎಂದು DC & ಜೋಗ ನಿರ್ವಹಣಾ ಪ್ರಾಧಿಕಾರದ ಜನರಲ್ಲಿ ಮನವಿ ಮಾಡಿದ್ದಾರೆ.