Sunday, January 25, 2026
Homeಟಾಪ್ ನ್ಯೂಸ್DK SHIVAKUMAR: ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು, ಡಿಕೆಶಿ ಭರವಸೆ

DK SHIVAKUMAR: ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು, ಡಿಕೆಶಿ ಭರವಸೆ

ದಕ್ಷಿಣ ಕನ್ನಡ : ಪ್ರವಾಸೋದ್ಯಮ (Tourism) ಇಲಾಖೆ, ಉಡುಪಿ (Udupi), ದಕ್ಷಿಣ ಕನ್ನಡ (Dakshina kannada), ಉತ್ತರ ಕನ್ನಡ ಜಿಲ್ಲಾಡಳಿತ ವತಿಯಿಂದ ‘ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ 2026’ನ್ನು ಶನಿವಾರ (ಜ.10) ದಂದು, ಆಯೋಜಿಸಿದ್ದ, ಈ ಕಾರ್ಯಕ್ರಮವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಉದ್ಘಾಟಿಸಿದರು.

ಈ ವೇಳೆ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಡಿಕೆಶಿ , ದೈವ, ದೇವರ ಶಕ್ತಿಕೇಂದ್ರ, ಪ್ರವಾಸಿಗರ ಸ್ವರ್ಗ, ವ್ಯಾಪಾರಿಗಳ ನಿಧಿ, ಕರಾವಳಿ ಜ್ಞಾನ ಸಂಪತ್ತಿನ ಪರ್ವತ, ವಿಶೇಷ್ಟ ಕಲೆ-ಸಂಸ್ಕೃತಿಗಳ ತವರೂರು. ಆದರೂ ಕೂಡ ಈ ಸ್ಥಳಗಳು ಪ್ರವಾಸೋದ್ಯಮದಲ್ಲಿ ಹಿಂದೆ ಉಳಿದಿದೆ ಎಂದಿದ್ದಾರೆ.

ಇದನ್ನೂ ಓದಿ : ಯಾರು ಡ್ಯಾಡಿ?- ಜೆಡಿಎಸ್‌ನ ಎಐ ಟೀಸರ್‌ ರಿಲೀಸ್‌ಗೆ ಡಿಕೆಸು ವ್ಯಂಗ್ಯ

ಈ ಎಲ್ಲ ಕಾರಣಗಳಿಂದಾಗಿ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯ ಅವಶ್ಯವಾಗಿದೆ. ಈಗಾಗಲೇ ರಾಜ್ಯ ಪ್ರವಾಸೋದ್ಯಮ ನೀತಿಯನ್ನು ಸಿದ್ದಪಡಿಸಲಾಗಿದೆ ಹಾಗೂ ಕರಾವಳಿ ಕುರಿತು ಚರ್ಚಸಿದ ಬಳಿಕ ಅದನ್ನು ಅಂತಿಮಗೊಳಿಸಲು ಉದ್ದೇಶಿಸಲಾಗಿದೆ. ಇದು ಕರಾವಳಿಯಲ್ಲಿ ಆದ ಮೊದಲ ಹಂತದ ಸಭೆ ಎಂದಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ಲಕ್ಷ್ಮಿ ಹೆಬ್ಬಾಳ್ಳರ್, ಮಂಕಾಳ ವೈದ್ಯ, ಸಚಿವರಾದ ದಿನೇಶ್ ಗುಂಡೂರಾವ್, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮತ್ತು ಪ್ರವಾಸೋದ್ಯಮ ಪಾಲುದಾರರು, ಉದ್ದಿಮೆದಾರರು, ಹಾಗೂ ಇತರೆ ಮುಖ್ಯ ಕಾರ್ಯಕರ್ತರು ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!