Friday, March 21, 2025
Homeಟಾಪ್ ನ್ಯೂಸ್ದೇವರ ದರ್ಶನಕ್ಕೆ ಎರಡು ದಿನ ಕಾಯಬೇಕು!

ದೇವರ ದರ್ಶನಕ್ಕೆ ಎರಡು ದಿನ ಕಾಯಬೇಕು!

ಅಮರಾವತಿ: ತಿರುಪತಿ ತಿರುಮಲದಲ್ಲಿ ಯಾವಾಗಲೂ ಭಕ್ತರ ದಂಡು ಇದ್ದೇ ಇರುತ್ತದೆ. ಇನ್ನು ರಜೆ ದಿನಗಳಲ್ಲಿ ಭಕ್ತರನ್ನು ನಿಯಂತ್ರಿಸುವುದು ನಿಜಕ್ಕೂ ಕಷ್ಟಕರ. ಈಗಾಗಲೇ ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದ್ದು, ಕುಟುಂಬ ಸಮೇತ ಜನರು ತಿರುಪತಿಯ ವೆಂಕಟೇಶನ ದರ್ಶನ ಪಡೆಯಲು ದಾಂಗುಡಿ ಇಡುತ್ತಿದ್ದಾರೆ.

ಹಾಗಾಗಿ ವೆಂಕಟರಮಣ ದೇವರ ದರ್ಶನಕ್ಕೆ ಎರಡು ದಿನ ಕಾಯಬೇಕಾಗಿದೆ. ಈ ಎಲ್ಲವನ್ನು ಗಮನದಲ್ಲಿ ಇರಿಸಿಕೊಂಡು ಭಕ್ತಾದಿಗಳು ತಿರುಪತಿಗೆ ಬರಬೇಕೆಂದು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.

ಉದ್ಯೋಗಿಗಳಿಗೆ ಶುಕ್ರವಾರ, ಶನಿವಾರ, ಭಾನುವಾರ ಮೂರು ದಿನಗಳ ಕಾಲ ಸತತ ರಜೆ ಇರುವುದರಿಂದ ತಿರುಮಲ ತಿಮ್ಮಪ್ಪನ ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!