Wednesday, December 4, 2024
Homeಟಾಪ್ ನ್ಯೂಸ್ACCIDENT : ಕಾರು - ಲಾರಿ ನಡುವೆ ಭೀಕರ ಅಪಘಾತ ! ಮೂವರ ದುರ್ಮರಣ !

ACCIDENT : ಕಾರು – ಲಾರಿ ನಡುವೆ ಭೀಕರ ಅಪಘಾತ ! ಮೂವರ ದುರ್ಮರಣ !

ಕನಕಪುರದಿಂದ ಸಂಗಮಕ್ಕೆ ತೆರಳುವ ಮಾರ್ಗದಲ್ಲಿ ಹುಲಿಬೆಲೆ ಎಂಬ ಗ್ರಾಮದ ಸಮೀಪ ಕಾರು ಅಪಘಾತ ಸಂಭವಿಸಿದ್ದು, ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಕಾರು ಮತ್ತು ಲಾರಿಯ ನಡುವೆ ಅಪಘಾತ ಸಂಭವಿಸಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೃತರನ್ನು ಬೆಂಗಳೂರಿನ ಬನಶಂಕರಿ ಮೂಲದವರು ಎಂದು ಗುರುತಿಸಲಾಗಿದ್ದು, ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಯುವಕರು ಸಂಗಮದಿಂದ ಬೆಂಗಳೂರಿನ ಕಡೆ ಹೊರಟಿದ್ದಾಗ ಹುಲಿಬೆಲೆ ಬಳಿ ಲಾರಿಗೆ ಡಿಕ್ಕಿ ಹೊಡೆದಿದೆ.

ಈ ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕನಕಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾರಿನಿಂದ ಮೃತದೇಹಗಳನ್ನು ಹೊರತೆಗೆದು,ಕನಕಪುರ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!