Sunday, June 7, 2026
Homeಕ್ರೈಂCORRUPTION: ಕೆಲಸ ಮಾಡೋಕೆ ಲಂಚ ಕೇಳಿದ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

CORRUPTION: ಕೆಲಸ ಮಾಡೋಕೆ ಲಂಚ ಕೇಳಿದ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಮಂಡ್ಯ: ರಾಜ್ಯದಲ್ಲಿ ಭ್ರಷ್ಟಾಚಾರ (Corruption) ತಾಂಡವ ಆಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸರ್ಕಾರದ (Government) ಪ್ರತಿಯೊಂದು ಇಲಾಖೆಯಲ್ಲಿ ಅಧಿಕಾರಿಗಳು (Officers) ಕೆಲಸ ಮಾಡಿಕೊಡಲು ಜನರಿಂದ ಲಂಚವನ್ನ ಕೇಳುತ್ತಿದ್ದು, ಇದೇ ರೀತಿ ಲಂಚದ ಹಣಕ್ಕೆ ಕೈ ಚಾಚಿದ್ದ ಮೂವರು ನೌಕರರು ಲೋಕಾಯುಕ್ತದ (Lokayukta) ಬಲೆಗೆ ಬಿದ್ದಿದ್ದಾರೆ.

30 ಸಾವಿರ ಕೇಳಿದ್ದ ಸಿಬ್ಬಂದಿ
ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನೆ ಪ್ರಾಧಿಕಾರದ ಮೂವರು ನೌಕರರು, ನಗರ ಯೋಜನೆ ಅನುಮೋದನೆ ನೀಡಲು 30 ಸಾವಿರ ರೂಪಾಯಿ ಲಂಚ ಕೇಳಿದ್ದು, ಇದೀಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಇಲಾಖೆಯ ಸಹಾಯಕ ನಿರ್ದೇಶಕಿ ಅನನ್ಯಾ, ನಗರ ಯೋಜಕರಾದ ಸೌಮ್ಯಾ ಮತ್ತು ಹರೀಶ್‌ ಈ ಮೂವರನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ಮದ್ದೂರು ತಾಲೂಕಿನ ಚಂದೂಪುರದ ಪುನೀತ್‌ ಎನ್ನುವವರು ನೀಡಿದ್ದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಬಂಧಿಸಿದ್ದಾರೆ.

ಇನ್ನು ಮಂಗಳವಾರ ಕಚೇರಿಯಲ್ಲಿ 15 ಸಾವಿರ ಅಡ್ವಾನ್ಸ್‌ ಪಡೆಯುವ ಸಮಯದಲ್ಲಿ ಲೋಕಾಯುಕ್ತಾ ಇನ್ಸ್‌ಪೆಕ್ಟರ್‌ ಬ್ಯಾಟರಾಯನ ಗೌಡ ನೇತೃತ್ವದ ತಂಡ ಸಾಕ್ಷಿ ಸಮೇತ ಆರೋಪಿಗಳನ್ನ ಬಂಧನ ಮಾಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ 30 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ರೇಡ್-‌ ಜಿಲ್ಲಾಸ್ಪತ್ರೆ ಸರ್ಜನ್ ಅಂದರ್‌

ಮಹಿಳಾ ಪೊಲೀಸ್‌ ಅಧಿಕಾರಿ ಲೋಕಾಯುಕ್ತ ಬಲೆಗೆ
ಬೆಂಗಳೂರಿನ ಗೋವಿಂದಪುರ  ಪೊಲೀಸ್ ಠಾಣೆಯ ಪಿಎಸ್‌ಐ‌ ಸಾವಿತ್ರಿ ಬಾಯಿ ಎಂಬುವವರು ಕೇಸ್ ವೊಂದರಲ್ಲಿ ಬಿ ರಿಪೋರ್ಟ್ ಹಾಕುವುದಕ್ಕೆ ಮೊಹಮ್ಮದ್ ಯೂನಸ್ ಎಂಬುವವರ ಬಳಿ 1.25 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.  ಗೋವಿಂದಪುರ ಠಾಣೆಯಲ್ಲಿ ಕ್ರೈಂ ನಂಬರ್ 144/25ರ ಕೇಸ್ ಸಂಬಂಧಿಸಿದಂತೆ ಬಿ ರಿಪೋರ್ಟ್ ಸಲ್ಲಿಸಲು ಪಿಎಸ್ಐ ಸಾವಿತ್ರಿ ಬಾಯಿ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಯೂನಸ್ ಅವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಬಳಿಕ ಟ್ರ್ಯಾಪ್ ಮಾಡಲು ಪ್ಲಾನ್ ಮಾಡಲಾಗಿತ್ತು.

ಅದರಂತೆ ಸಾವಿತ್ರಿ ಬಾಯಿ ಅವರಿಗೆ 1.25 ಲಕ್ಷ ಹಣ ನೀಡುವ ವೇಳೆ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ಲೋಕಾಯುಕ್ತ ಪೊಲೀಸರು ಸಾವಿತ್ರಿ ಬಾಯಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಯುಪಿಐ ವಿಚಾರದಲ್ಲಿ ಅಧಿಕಾರಿಗಳು ಲಂಚ ಕೇಳ್ತಿದಾರಾ? – ಈ ಹೆಲ್ಪ್‌ ಲೈನ್‌ಗೆ ಕರೆ ಮಾಡಿ

5 ಸಾವಿರ ರೂಪಾಯಿ ಲಂಚ ಪಡೆಯುವಾಗ ಪೊಲೀಸ್‌ ಅರೆಸ್ಟ್‌
ಸಂಚಾರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ 5000 ರೂಪಾಯಿ ಲಂಚ ಪಡೆಯಲು ಮುಂದಾಗಿ ಲೋಕಾಯುಕ್ತ ಅಧಿಕಾರಿಗಳ ಬಲೆಯಲ್ಲಿ ಲಾಕ್ ಆಗಿದ್ದಾರೆ. ಕದ್ರಿಯ ಪೂರ್ವ ಸಂಚಾರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ತಸ್ಲಿಂ ಅವರನ್ನ ಬಂಧಿಸಲಾಗಿತ್ತು. ಕದ್ರಿ ಸಂಚಾರ ಠಾಣೆ ಸಿಬ್ಬಂದಿ ತಸ್ಲಿಂ ಹಾಗೂ ವಿನೋದ್ ವಿರುದ್ಧ ಪ್ರಕರಣ ಕೂಡ ದಾಖಲು ಮಾಡಲಾಗಿತ್ತು. ಹೀಗಿದ್ದಾಗ ಆರೋಪಿ ತಸ್ಲಿಂ ಕಾರಿನ ಮಾಲೀಕರಿಂದ ಗುರುವಾರ ₹5 ಸಾವಿರ ಲಂಚ ಪಡೆಯುವ ಸಮಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದು,ಲಾಕ್ ಆಗಿದ್ದಾರೆ. ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ವಶಕ್ಕೆ ಪಡೆಯಲಾಗಿತ್ತು.

ಹೆಚ್ಚಿನ ಸುದ್ದಿ

Change Language »
error: Content is protected !!