Saturday, January 25, 2025
Homeದೇಶಯುಪಿಎಸ್ಸಿ ಬರೆದು ಅಧಿಕಾರಿಗಳಾದ ಹೆಚ್ಚಿನವರು ಡಕಾಯಿತರು: ಕೇಂದ್ರ‌‌ ಸಚಿವರ ಹೇಳಿಕೆ

ಯುಪಿಎಸ್ಸಿ ಬರೆದು ಅಧಿಕಾರಿಗಳಾದ ಹೆಚ್ಚಿನವರು ಡಕಾಯಿತರು: ಕೇಂದ್ರ‌‌ ಸಚಿವರ ಹೇಳಿಕೆ

ನವದೆಹಲಿ: ಯುಪಿಎಸ್ಸಿ ಪರೀಕ್ಷೆ ಬರೆದು ಅಧಿಕಾರಿಗಳಾದ ಹೆಚ್ಚಿನವರು ಡಕಾಯಿತರು ಎಂದು ಕೇಂದ್ರ ಸಚಿವ ಬಿಶೇಶ್ವರ್ ಟುಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ಒಬ್ಬ ಕೋಳಿ ಕಳ್ಳನನ್ನು ಬಂಧಿಸಲು ಸಾಧ್ಯ ಇದೆ. ಆದರೆ ಮಿನರಲ್ ಮಾಫಿಯಾ ನಡೆಸುವ ಅಧಿಕಾರಿಯನ್ನು ಬಂಧಿಸಲು ಸಾಧ್ಯವಿಲ್ಲ. ಯಾಕೆಂದರೆ ಆತನ ಹಿಂದೆ ವ್ಯವಸ್ಥೆ ಇದೆ. ಆತನನ್ನು ವ್ಯವಸ್ಥೆ ರಕ್ಷಿಸುತ್ತದೆ” ಎಂದವರು ಹೇಳಿದರು.

*ಯುಪಿಎಸ್ಸಿ ಪರೀಕ್ಷೆ ಬರೆದು ಅಧಿಕಾರಿಗಳಾದವರು ಜ್ಞಾನವಂತರು ಎಂದು ನಾನು ಭಾವಿಸಿದ್ದೆ. ಆದರೆ ಅವರಲ್ಲಿ ಹೆಚ್ಚಿನವರು ಡಕಾಯಿತರು ಎಂದು ನನಗನಿಸುತ್ತದೆ. ಇದು ಎಲ್ಲರ ಬಗ್ಗೆ ನೀಡುತ್ತಿರುವ ಹೇಳಿಕೆಯಲ್ಲ ಎಂಬ ಸಚಿವರ ಹೇಳಿಕೆ ವೈರಲ್ ಆಗಿದ್ದು ಭಾರಿ ವಿವಾದವನ್ನು ಸೃಷ್ಟಿಸಿದೆ.

ಆದರೆ ಈ ವಿಡಿಯೋ ಯಾವಾಗಿನದ್ದು ಮತ್ತು ಈ ವಿಡಿಯೋ ಅಸಲಿಯೇ, ನಕಲಿಯೇ ಎನ್ನುವಂತಹದ್ದು ಇನ್ನಷ್ಟೇ ತಿಳಿದು ಬರಬೇಕಿದೆ.

ಹೆಚ್ಚಿನ ಸುದ್ದಿ

error: Content is protected !!