Thursday, March 27, 2025
Homeಟಾಪ್ ನ್ಯೂಸ್MAHAKUMBH MELA 2025: ತಮಗೆ ಅರಿವಿಲ್ಲದೇ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ: ದೀದೀ ಹೇಳಿಕೆಗೆ...

MAHAKUMBH MELA 2025: ತಮಗೆ ಅರಿವಿಲ್ಲದೇ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ: ದೀದೀ ಹೇಳಿಕೆಗೆ ಪವನ್ ಕಲ್ಯಾಣ್ ಕಿಡಿ

ಪ್ರಯಾಗರಾಜ್:‌ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಇಂದು ಹಲವಾರು ರಾಜಕೀಯ ನಾಯಕರು ಭೇಟಿ ನೀಡಿ ಪವಿತ್ರ ಸ್ನಾನವನ್ನು ಮಾಡಿದ್ದಾರೆ. ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಕೂಡಾ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದಿದ್ದಾರೆ.

ಪವಿತ್ರ ಸ್ನಾನದ ಬಳಿಕ ಪ್ರಾರ್ಥನೆ ಮಾಡಿ, ಮಾಧ್ಯಮಗಳೊಂದಿಗೆ ಮಾತನಾಡಿದ ಪವನ್‌ ಕಲ್ಯಾಣ್‌ ಮಹಾಕುಂಭಮೇಳದ ಬಗ್ಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನೀಡಿದ ವಿವಾದಿತ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮಹಾಕುಂಭ ಅಲ್ಲ.. ಮೃತ್ಯುಕುಂಭ ಎಂದ ಮಮತಾ ಬ್ಯಾನರ್ಜಿ ತಮಗೆ ಅರಿವಿಲ್ಲದೇ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದಿದ್ದಾರೆ.

ಮಮತಾ ಅವರು ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ. ನಮ್ಮಲ್ಲಿ ನಾಯಕತ್ವದ ಸಮಸ್ಯೆಯೆಂದರೆ ಸನಾತನ ಧರ್ಮ ಅಥವಾ ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡುವುದು ತುಂಬಾ ಸುಲಭ. ಆದರೆ ಅದೇ ರೀತಿಯ ಹೇಳಿಕೆಗಳನ್ನು ಇತರ ಧರ್ಮಗಳ ಬಗ್ಗೆ ಯಾರೂ ನೀಡುವುದಿಲ್ಲ. ಅವರು ತಮಗೆ ಅರಿವಿಲ್ಲದೇ ಕೋಟ್ಯಂತರ ಜನರ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಈ ರೀತಿ ಕೋಟ್ಯಂತ ಜನರು ಪವಿತ್ರ ಸಂಗಮದಲ್ಲಿ ಒಟ್ಟುಗೂಡುವುದೇ ದೊಡ್ಡ ವಿಚಾರ. ಆದರೆ ದುರದೃಷ್ಟಕರ ಘಟನೆಗಳು ನಡೆಯಬೇಕೆಂದು ಯಾರು ಕೂಡಾ ಬಯಸಲ್ಲ. ಅದರ ಬಗ್ಗೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪವನ್‌ ಕಲ್ಯಾಣ್‌ ಹೇಳಿಕೆ ನೀಡಿದ್ದಾರೆ.

ಇನ್ನು ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ರಾಜಕೀಯ ನಾಯಕರು ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!