ಚಿತ್ರದುರ್ಗ: ಚಿತ್ರದುರ್ಗ ಟಿಕೆಟ್ ವಂಚಿತರಾದ ಎಸ್.ಕೆ ಬಸವರಾಜನ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಪಾರ್ಟಿಯಲ್ಲಿ ಚುನಾವಣಾ ಟಿಕೆಟ್ ಹರಾಜಾಗಿದೆ. ನಾವೆಂದೂ ಅದನ್ನು ನೋಡಿಲ್ಲ ಆದ್ರೆ ಈ ಬಾರಿ ಚುನಾವಣೆ ಗೆಲ್ಲಲು ಎಷ್ಟು ಖರ್ಚು ಮಾಡುತ್ತಾರೋ ಅಷ್ಟೇ ದುಡ್ಡು ಕೊಟ್ಟು ಚುನಾವಣಾ ಟಿಕೆಟ್ ಪಡೆದಿದ್ದಾರೆ ಎಂದು ಕೆಪಿಸಿಸಿಯಲ್ಲೇ ಮಾತಾಡಿಕೊಳ್ಳೋದನ್ನು ಕೇಳಿದ್ದೇನೆ ಎಂದು ಆರೋಪ ಮಾಡಿದ್ರು
ಚಿತ್ರದುರ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜನ್, ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಸೌಭಾಗ್ಯರನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ನಾನು ಯಾವುದೇ ಚುನಾವಣೆಗಳಲ್ಲಿ ಸೋಲು ಕಂಡಿಲ್ಲ. ಗ್ರಾ.ಪಂ, ತಾ.ಪಂ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದೇನೆ. ಗ್ರಾ.ಪಂ ಉಪಾಧ್ಯಕ್ಷೆ, ತಾ.ಪಂ. ಅಧ್ಯಕ್ಷೆ ಹಾಗೂ 3 ಬಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದೇನೆ. ನಾನು ಯಾವತ್ತೂ ಸೋತಿಲ್ಲ ಎಂಬುದು ಬೆಂಬಲಿಗರ ಅಭಿಪ್ರಾಯ. ಹೀಗಾಗಿ ಈ ಬಾರಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಂಕ್ಕಿಳಿಯುತ್ತೇನೆ ಎಂದ್ರು