ಚುನಾವಣಾ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಮಾಧ್ಯಮಗೋಷ್ಠಿ ನಡೆಸಿದ ಡಿಕೆಶಿ ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಮೇ 10 ಕ್ಕೆ ಕರ್ನಾಟಕಕ್ಕೆ ಹೊಸ ದಿಕ್ಕು ಸಿಗಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ಹೊಸ ಹೊಸ ಪದ್ಧತಿ ಅಳವಡಿಸಿದ್ದಾರೆ. ಒಂದೇ ಹಂತದ ಚುನಾವಣೆಯನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ಹಗಲುಗನಸು ಕಾಣುತ್ತಿದೆ. ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರಿಗೆ ತಿಳಿದಿದೆ. ಕರ್ನಾಟಕದಲ್ಲಿ ಹೊಸ ಕಾಂಗ್ರೆಸ್ ಎಂಜಿನ್ ಬರಲಿದೆ, ಈಗ ಕರ್ನಾಟಕದಲ್ಲಿ ಹೊಸ ಪ್ರಗತಿಪರ ಭವಿಷ್ಯದ ಅಲೆ ಶುರುವಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಮೋದಿ ಅಲೆ ಇಲ್ಲ, ಇದ್ದಿದ್ದರೆ ಪದೇ ಪದೇ ಮೋದಿ ರಾಜ್ಯಕ್ಕೆ ಓಡಿ ಬರ್ತಿರಲಿಲ್ಲ. ಅವರಿಗೆ ಭಯ ಶುರುವಾಗಿದೆ. ಅದಕ್ಕೆ ಅಮಿತ್ ಶಾ ಬಿಜೆಪಿ ನಾಯಕರ ಮನೆ ಮನೆಗೆ ಓಡಾಟುತ್ತಿದ್ದಾರೆ. 40% ಕಮಿಷನ್ ಬಗ್ಗೆ ಜನರಿಗೆ ಅರ್ಥ ಆಗಿದೆ, ಲೋಕಾಯುಕ್ತ ಅದಿಕ್ಕೆ ಮುದ್ರೆ ಒತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ.
ಗುಜರಾತಿನಲ್ಲಿ ಬಳಸಿದ ಇವಿಎಂ ಯಂತ್ರಗಳನ್ನು ಇಲ್ಲಿಗೆ ತರಬಾರದು ಎಂದಿದ್ದೇವೆ, ನಮ್ಮ ಏಜೆಂಟರುಗಳ ಎದುರು 50 ಮತಗಳನ್ನು ಚಲಾಯಿಸಿ ಪರೀಕ್ಷೆ ಮಾಡಿಸುತ್ತೇವೆ, ಯಂತ್ರಗಳನ್ನು ಪ್ರೊಗ್ರಾಮಿಂಗ್ ಮಾಡಿದ್ದಾರೆ ಅನ್ನುವ ಅನುಮಾನ ಇದೆ, ಅದನ್ನು ಪರಿಶೀಲಿಸುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.