Sunday, January 25, 2026
Homeಕ್ರೈಂCRIME : ವೈದ್ಯೆ ಕೃತಿಕಾ ರೆಡ್ಡಿ ಕೊ*ಲೆ ಕೇಸ್, ಚಾರ್ಜ್​​​​​ಶೀಟ್​​​​​​​ ಸಲ್ಲಿಸಿದ ಪೊಲೀಸರು

CRIME : ವೈದ್ಯೆ ಕೃತಿಕಾ ರೆಡ್ಡಿ ಕೊ*ಲೆ ಕೇಸ್, ಚಾರ್ಜ್​​​​​ಶೀಟ್​​​​​​​ ಸಲ್ಲಿಸಿದ ಪೊಲೀಸರು

ಬೆಂಗಳೂರು: 2025ರ ಏಪ್ರಿಲ್ 24 ರಂದು ನಡೆದಿದ್ದ ವೈದ್ಯೆ ಕೃತಿಕಾ ರೆಡ್ಡಿ (Dr Krithika reddy) ಕೊಲೆ ಪ್ರಕರಣದಲ್ಲಿ (Crime) ಇದೀಗ ಮಹತ್ವದ ಬೆಳವಣಿಗೆಯಾಗಿದೆ. ಈ ಕೇಸ್ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ (Charge sheet) ಸಲ್ಲಿಸಿದ್ದಾರೆ. ಹೌದು ಮಾರತಹಳ್ಳಿ ಠಾಣೆ ಪೊಲೀಸರು ಒಟ್ಟು 3,786 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಿದ್ದಾರೆ.

ಈ ಕೊಲೆ ಕೇಸ್ ನ ಪ್ರಮುಖ ಆರೋಪಿ ಆರೋಪಿ ಡಾ. ಮಹೇಂದ್ರ ರೆಡ್ಡಿ ವಿರುದ್ಧ ಚಾರ್ಚ್ ಶೀಟ್ ಸಲ್ಲಿಕೆಯಾಗಿದ್ದು, ಇದರಲ್ಲಿ ಆರೋಪಕ್ಕೆ ಪೂರಕವಾಗುವಂತೆ ಹಲವು ಮಹತ್ವದ ಸಾಕ್ಷ್ಯಾಧಾರಗಳನ್ನು ಒದಗಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಡಾಕ್ಟರ್ ಆಗಬೇಕಿದ್ದ ವಿದ್ಯಾರ್ಥಿನಿ ಹೆಣವಾದಳು, ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಬ*ಲಿ?

ಪೊಲೀಸರು ಈಗಾಗಲೇ ಈ ಬಗ್ಗೆ ತನಿಖೆ ನಡೆಸಿದ್ದು, ಈ ವೇಳೆ ಲಭ್ಯವಾದ ಟೆಕ್ನಿಕಲ್ ಸಾಕ್ಷ್ಯಗಳು ಹಾಗೂ ಕೆಲವು ಎಫ್‌ಎಸ್‌ಎಲ್ ರಿಪೋರ್ಟ್ ಗಳನ್ನು ಕೂಡ ಈ ಚಾರ್ಜ್ ಶೀಟ್ ಹೊಂದಿದೆ.

ಪತ್ನಿ ಕೃತಿಕಾ ರೆಡ್ಡಿ ಗೆ ಇಂಜೆಕ್ಷನ್ ಕೊಟ್ಟು ಪತಿ ಮಹೇಂದ್ರ ರೆಡ್ಡಿ ಕೋಕ್ ಮಾಡಿ, ಇದನ್ನು ಸಹಜ ಸಾವು ಎಂದು ಬಿಂಬಿಸಿ, ಆಜೆ ಅನಾರೋಗ್ಯದಿಂದ ಮೃತಪಟ್ಟಿದಾಳೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದ ಮಹೇಂದ್ರ ರೆಡ್ಡಿಯನ್ನು ಅಕ್ಟೋಬರ್ ತಿಂಗಳಲ್ಲಿ ಮಾರತಹಳ್ಳಿ ಪೊಲೀಸರು ಬಂಧಿಸಿದ್ದರು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!