ಭ್ರಷ್ಟ ಶಾಸಕ ಮಾಡಾಳ ವಿರೂಪಾಕ್ಷಪ್ಪ ಮತ್ತು ಮಾಗಡಿಯ ಭ್ರಷ್ಟ ತಹಸೀಲ್ದಾರ್ ಶ್ರೀನಿವಾಸ್ ಪ್ರಸಾದ್ನನ್ನು ರಕ್ಷಿಸಿದ್ದೇ ಲೋಕಾಯುಕ್ತ ಸಂಸ್ಥೆ ಎಂದು ಕರ್ನಾಟಕ ರಾಷ್ಟ್ರೀಯ ಸಮಿತಿ ಆರೋಪಿಸಿದೆ.
ಜನವರಿ 2, 2023 ರಂದು ಲೋಕಾಯುಕ್ತ ಸಂಸ್ಥೆಯವರು ಲಂಚದ ಪ್ರಕರಣದಲ್ಲಿ ಮಾಗಡಿಯ ಭ್ರಷ್ಟ ತಹಸೀಲ್ದಾರ್ ಶ್ರೀನಿವಾಸ್ ಪ್ರಸಾದ್ ಲಂಚ ಪಡೆದು ಸಿಕ್ಕಿಬಿದ್ದಿದ್ದರು. ಆದರೆ ಪ್ರಕರಣದ A1 ಆರೋಪಿ ಶ್ರೀನಿವಾಸ್ ಪ್ರಸಾದನನ್ನು ಬಂಧಿಸದೆ, ಆತ ತಪ್ಪಿಸಿಕೊಂಡು ಓಡಿಹೋಗಲು ಅವಕಾಶ ಮಾಡಿಕೊಟ್ಟರು. ನಂತರ ಭ್ರಷ್ಟ ತಹಸೀಲ್ದಾರ್ ಶ್ರೀನಿವಾಸ ಪ್ರಸಾದ್ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ಸಾಧ್ಯವಾಯಿತು.
ಇದಾದ ಎರಡು ತಿಂಗಳ ನಂತರ 02-03-2023 ರಂದು ಒಂದು ದೊಡ್ಡ High-profile ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪ್ರತಿಷ್ಠಿತ KSDL ಸಂಸ್ಥೆಯ ಅಧ್ಯಕ್ಷರಾಗಿದ್ದ ಭ್ರಷ್ಟ ಶಾಸಕ ಮಾಡಾಳು ವಿರೂಪಾಕ್ಷಪ್ಪನ ಮಗನೂ, KAS ಅಧಿಕಾರಿಯೂ ಆಗಿರುವ ಪ್ರಶಾಂತ್, ತನ್ನ ತಂದೆಯ ಹೆಸರಿನಲ್ಲಿ 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸ್ಥಳದಲ್ಲಿಯೇ ಬಂಧಿಸಿದರು. ಆದರೆ, ಈ ಪ್ರಕರಣದಲ್ಲಿ A1 ಆರೋಪಿ ಮಾಡಾಳ್ ವಿರೂಪಾಕ್ಷಪ್ಪನನ್ನು ಬಂಧಿಸದೆ ಕಾಲಹರಣ ಮಾಡಿದರು.
ಇದಾದ ಆರೇಳು ದಿನಗಳ ನಂತರ ವಿರೂಪಾಕ್ಷಪ್ಪನ ಪರವಾಗಿ ತರಾತುರಿಯಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ, ಆ ಸಮಯದಲ್ಲಿ ಬೇಕಂತಲೇ ಲೋಕಾಯುಕ್ತದ ಹಿರಿಯ ವಕೀಲರು ನ್ಯಾಯಾಲಯದಲ್ಲಿ ಗೈರು ಹಾಜರಾಗುವ ಹಾಗೆ ನೋಡಿಕೊಳ್ಳಲಾಯಿತು. ಈ ಎಲ್ಲಾ ಪಿತೂರಿ, ಆದಕ್ಷತೆ, ನಾಲಾಯಕ್‌ತನ, ಭ್ರಷ್ಟಾಚಾರದ ಕಾರಣ ಕಡುಭ್ರಷ್ಟ ಆರೋಪಿಗೆ ಜಾಮೀನು ಸಿಕ್ಕಿತು.
ಈ ಪ್ರಕರಣ ಇಡೀ ಲೋಕಾಯುಕ್ತ ಸಂಸ್ಥೆಗೆ ಅವಮಾನಕಾರಿ. ಮಾಡಾಳು ವಿರೂಪಾಕ್ಷಪ್ಪನ ಮೆರವಣಿಗೆಯಂತೂ ರಾಜ್ಯದ ಜನರಿಗೆ ಮಾಡಿದ ಅವಮಾನ. ರಾಜ್ಯದ ಜನರ ಮರ್ಯಾದೆ ದೇಶ ಮಟ್ಟದಲ್ಲಿ ಹರಾಜಾಯಿತು.
ಇಲ್ಲಿ ಕೇವಲ ಅದಕ್ಷತೆ ಮಾತ್ರವಲ್ಲ, ಲೋಕಾಯುಕ್ತ ಅಧಿಕಾರಿಗಳು ಆರೋಪಿಯಿಂದ ಲಂಚ ಪಡೆದು ಡೀಲ್ ಆಗಿರುವ ಸಾಧ್ಯತೆಗಳೇ ಹೆಚ್ಚು ಎಂದು ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಕಿಡಿಕಾರಿದ್ರು. ಅಲ್ಲದೇ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳಯ ಮೇಲೆ ಲೋಕಾಐಉಕ್ತದಲ್ಲಿ ಆಂತರಿಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ರು