ವಾಷಿಂಗ್ಟನ್: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ವರ್ ಹಕ್ಕಿ ಲೊಗೊ ನಾಯಿ ಮರಿಯಾಗಿ ಬದಲಾಣೆಗೊಂಡಿದೆ.
ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಮಾಲೀಕ ಕಂಪನಿಯಲ್ಲಿ ಹಲವಾರು ಬದಲಾವಣೆ ಮಾಡಿರುವ್ ಎಲಾನ್ ಮಸ್ಕ್, ಇದೀಗ ಟ್ವಿಟ್ಟರ್ ಲೊಗೊವನ್ನೇ ಬದಲಾವಣೆ ಮಾಡಿದ್ದಾರೆ. ಸೋಮವಾರ ರಾತ್ರಿ ಟ್ವಿಟ್ಟರ್ ಹಕ್ಕಿ ಲೊಗೊ ನಾಯಿಯಾಗಿ ಬದಲಾಗಿದೆ.
ಈ ಲೊಗೊ ಬದಲಾವಣೆ ಹಿಂದಿನ ವಾಸ್ತವ ಏನೆಂದರೆ, ಟ್ವಿಟ್ವರ್ ಮಾಲೀಕ ಎಲಾನ್ ಮಾಸ್ಕ್ ಅವರ ಮುದ್ದಿನ ನಾಯಿಯಾದ ಶಿಬಾ ಇನು ಮರಿ ಹಾಕಿದೆ. ಆ ಮರಿಗೆ ಫ್ಲಾಕಿ ಎಂದು ಹೆಸರಿಟ್ಟಿದ್ದಾರೆ ಮಸ್ಕ್. ಈ ಖುಷಿಗೆ ಟ್ವಿಟ್ವರ್ ಹಕ್ಕಿ ಲೊಗೊ ಫ್ಲಾಕಿ ನಾಯಿಮರಿಯಾಗಿ ಬದಲಾಯಿಸಿದ್ದಾರೆ.
ಎರಡು ದಿನ ತಡವಾಗಿ ಮಾಡಿದ ಎಪ್ರಿಲ್ ಪೂಲ್ ಎಂದು ಕ್ರೈಡ್ ಮ್ಯಾನ್ ಎಂಬ ಖಾತೆಯ ಹಾಸ್ಯವತ್ತಾಗಿ ಬರೆದುಕೊಂಡಿದೆ. ಅಲ್ಲದೇ, #Doge ಎಂದು ಬಳಸಿ ಮಾನವನ ದೇಹಕ್ಕೆ ನಾಯಿ ತಲೆ ಅಂಟಿಸಿದ ವಿವಿಧ ರೀತಿಯ ಪೋಸ್ಟರ್‌ಗಳನ್ನು ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡು ಕುಟುಕುತ್ತಿದ್ದಾರೆ. ಒಟ್ಟಿನಲ್ಲಿ ಹಲವು ಬಳಕೆದಾರರು ಟ್ವಿಟರ್ ಲಾಗಿನ್ ಆದ ತಕ್ಷಣ ಹೋಮ್ ಪೇಜಿನಲ್ಲಿ ನಾಯಿ ಲೊಗೊ ಕಂಡು ಬೆರಗಾಗುತ್ತಿದ್ದಾರೆ.