Sunday, January 25, 2026
Homeಕ್ರೈಂCRIME : ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹ*ತ್ಯೆ ಕೇಸ್​​​​​​​ಗೆ ಬಿಗ್ ಟ್ವಿಸ್ಟ್.. ಡೆತ್ ನೋಟ್​​​​​​​​​​ನಲ್ಲಿ ಏನಿದೆ?

CRIME : ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹ*ತ್ಯೆ ಕೇಸ್​​​​​​​ಗೆ ಬಿಗ್ ಟ್ವಿಸ್ಟ್.. ಡೆತ್ ನೋಟ್​​​​​​​​​​ನಲ್ಲಿ ಏನಿದೆ?

ಬೆಂಗಳೂರು: ಡಾಕ್ಟರ್ ಆಗಬೇಕಿದ್ದ ವಿದ್ಯಾರ್ಥಿನಿ (Medical students) ಆತ್ಮಹತ್ಯೆ ಮಾಡಿಕೊಂಡ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು, ಮತ್ತೊಂದೆಡೆ ಈಕೆಯ ಸಾವಿಗೆ ಕಾರಣ ಏನು ಎಂಬ ಪ್ರಶ್ನೆ ಕೂಡ ಮೂಡಿತ್ತು..ಇದೀಗ ಡೆಂಟಲ್ ಕಾಲೇಜು (Dental college) ವಿದ್ಯಾರ್ಥಿನಿ ಆತ್ಮಹತ್ಯೆಗೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

23 ವರ್ಷದ ಯಶಸ್ವಿನಿ ಆತ್ಮ ಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ಸಿಕ್ಕಿದ್ದು,ಅದರಲ್ಲಿ ನಾನು ಬದುಕಕ್ಕೆ ಯೋಗ್ಯಳಲ್ಲ, ಕ್ಷಮಿಸಿಬಿಡಿ. ನನ್ನ ಸಾವಿಗೆ ಯಾರು ಕಾರಣರಲ್ಲ. ನಾನು ಒಳ್ಳೆಯ ಮಗಳಲ್ಲ. ಅಮ್ಮ Thank You So Much ಎಂದು ಬರೆದಿದ್ದಾಳೆ.

ಇದನ್ನೂ ಓದಿ : ಡಾಕ್ಟರ್ ಆಗಬೇಕಿದ್ದ ವಿದ್ಯಾರ್ಥಿನಿ ಹೆಣವಾದಳು, ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಬ*ಲಿ?

ಇದರ ಬೆನ್ನಲ್ಲೇ ಮೃತ ಯಶಸ್ವಿನಿ ಕಾಲೇಜಿನಲ್ಲಿ ಅಳುತ್ತಾ ಕುಳಿತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದೆ.

ಇನ್ನು ಓರಲ್ ಮೆಡಿಸಿನ್ ಹಾಗೂ ರೇಡಿಯಾಲಜಿ ವಿಭಾಗದಲ್ಲಿ 3ನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಯಶಸ್ವಿನಿಗೆ ಕಾಲೇಜಿನಲ್ಲಿ ಕಿರುಕುಳ ಕೊಟ್ಟ ಬಗ್ಗೆ ಹಾಗೂ ಸೆಮಿನಾರ್‌ಗೆ ಅವಕಾಶ ನೀಡದೆ ಟಾರ್ಚರ್ ಆರೋಪ ಕೇಳಿಬಂದಿದ್ದು, ಬುಧವಾರ ಕಣ್ಣು ನೋವಿಗೆ ರಜೆ ಹಾಕಿದ್ದಕ್ಕಾಗಿ ವಿದ್ಯಾರ್ಥಿನಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂಬ ಆರೋಪವನ್ನು ಮೃತಳ ತಾಯಿ ಮಾಡಿ ದೂರು ನೀಡಿದ್ದಾರೆ ಮಾಡಲಾಗಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!